ಆಸ್ಕರ್ ಫೆರ್ನಾಂಡಿಸ್ ವಿಧಿವಶ: ಉಡುಪಿಯ ಶೋಕಮಾತಾ ಚರ್ಚ್ನಲ್ಲಿ ಬಲಿಪೂಜೆ
ಹಿರಿಯ ಕಾಂಗ್ರೆಸ್ ಮುಖಂಡ ಅಸ್ಕರ್ ಫೆರ್ನಾಂಡೀಸ್ ರವರಿಗೆ ಉಡುಪಿಯ. ಶೋಕಾ ಮಾತಾ ಚರ್ಚ್ ನಲ್ಲಿ ಬಲಿ ಪೂಜೆ ಹಾಗೂ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.
ಅಗಲಿದ ಅಸ್ಕರ್ ಫೆರ್ನಾಂಡೀಸ್ರ ಮೃತ ದೇಹವನ್ನು ಸಕಲ ಗೌರವಗಳೊಂದಿಗೆ ಉಡುಪಿಗೆ ಚರ್ಚ್ಗೆ ವಿಶೇಷ ವಾಹನದಲ್ಲಿ ತರಲಾಗಿತ್ತು. ಈ ಸಂಧರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್ ಮಧ್ವರಾಜ್, ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಶಾಸಕ ಯುಟಿ ಖಾದರ್ ಐವನ್ ಡಿಸೋಜಾ, ಜೆ ಅರ್ ಲೋಬೋ ಮತ್ತಿತ್ತರು ಹೂ ಗುಚ್ಚ ಗಳನ್ನಿಟ್ಟು ಶ್ರದ್ದಾಂಜಲಿ ಸಲ್ಲಿಸಿದರು. ಜಿಲ್ಲಾಡಳಿತ ವತಿಯಿಂದ ಕೂರ್ಮಾ ರಾವ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಹಿರಿಯ ಅಧಿಕಾರಿಗಳು ಶ್ರದ್ದಾಂಜಲಿ ಸಲ್ಲಿಸಿದರು. ಚರ್ಚಿನಲ್ಲಿ ಬಿಷಪ್ ಜೆರಾಲ್ಡ್ ಲೋಬೋ ಅಸ್ಕರ್ ಫೆರ್ನಾಡೀಸ್ ರವರ ಪಾರ್ಥೀವ ಶರೀರಕ್ಕೆ ವಿಧಿವಿಧನಗಳನ್ನು ನೇರವೇರಿಸಿ ಅತ್ಮಕ್ಕೆ ಶಾಂತಿಸಲ್ಲಿಸಿದರು.