ಉಡುಪಿ: ಉಡುಪಿ ಸರಕಾರಿ ಬೋರ್ಡ್ ಪದವಿ ಪೂರ್ವ ಕಾಲೇಜಿನಲ್ಲಿ ಅಗ್ನಿಪಥ್ – ಅಗ್ನಿವೀರ್ ತರಬೇತಿ ಪೂರ್ವ ಮಾಹಿತಿ ಶಿಬಿರ’ ನಡೆಯಿತು.
ತಾನು ಮುಂದೆ ಏನಾಗಬೇಕು, ಯಾವ ರೀತಿ ಬದುಕಬೇಕು, ಯಾವ ಶಿಕ್ಷಣ ಪಡೆಯಬೇಕು, ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ದೇಶವನ್ನು ಹೇಗೆ ಗೌರವಿಸಬೇಕು ಎಂಬ ಉನ್ನತ ಮೌಲ್ಯಗಳು ಅಗ್ನಿವೀರ್ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ‘ಭಾರತ್ ಭಾರತಿ’ ಸಂಸ್ಥೆಯ ಸೈನಿಕ ವಿಭಾಗದ ದಕ್ಷಿಣ ಪ್ರಾಂತ ಸಂಯೋಜಕರಾದ ಶ್ರೀಪಾದ್ ಭಟ್ ಹೇಳಿದರು.
ಅವರು ಉಡುಪಿ ಸರಕಾರಿ ಬೋರ್ಡ್ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಅಗ್ನಿಪಥ್ – ಅಗ್ನಿವೀರ್ ತರಬೇತಿ ಪೂರ್ವ ಮಾಹಿತಿ ಶಿಬಿರ’ದಲ್ಲಿ ದಿಕ್ಕೂಚಿ ಭಾಷಣ ಮಾಡಿದರು.ಉಡುಪಿಯ ಗಣೇಶ್ ರಾವ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಜಿ.ಎಸ್ ಅವರು ಮಾತನಾಡಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.
ಕಾಲೇಜಿನ ಎನ್.ಎಸ್.ಎಸ್ (NSS) ಘಟಕ, ಅಧ್ಯಾಪಕ ವೃಂದ ಹಾಗೂ ಸಮಾಜ ಸೇವಕರಾದ ಸಂತೋಷ್ ಎಂ. ಶೆಟ್ಟಿಗಾರ್ ಅವರು ಕಾರ್ಯಕ್ರಮದ ಯಶಸ್ಸಿಗೆ ಪೂರ್ಣ ಸಹಕಾರ ನೀಡಿದರು.
ಶಿಬಿರದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು ಅಗ್ನಿವೀರ್ ಯೋಜನೆ ಮತ್ತು ದೇಶಸೇವೆಯ ಕುರಿತು ಉಪಯುಕ್ತ ಮಾಹಿತಿ ಪಡೆದರು.


