ಎಸ್ ಕೆ ಪಿ ಎ ಅಯೋಜಿಸಿದ್ದ ಪ್ರತಿಷ್ಟಿತ ಛಾಯಾ ಚಿತ್ರ ಸ್ಪರ್ಧೆ:ಛಾಯಾಗ್ರಾಹಕ ಅಶ್ವಿನ್ ಕೊಡವೂರಿಗೆ ಪ್ರಥಮ ಬಹುಮಾನ
ಕರಾವಳಿಯ ಎಸ್ ಕೆ ಪಿ ಎ ಛಾಯಾಗ್ರಾಹಕರ ಸಂಘಟನೆ ಎರ್ಪಡಿಸಿ ಪ್ರತಿಷ್ಠಿತ ಛಾಯಾಗ್ರಹ ಸ್ಪರ್ಧೆಯಲ್ಲಿ ಉದಯೋನ್ಮುಖ ಯುವ ಛಾಯಾಗ್ರಾಹಕ ಅಶ್ವಿನ್ ಕೊಡವೂರಿಗೆ ವೆಡ್ಡಿಂಗ್ ಮೂಂಮೆಟ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ ದೊರಕಿದೆ.ಮದುವೆ ಸಂಭ್ರಮದಲ್ಲಿ ತಂದೆ ಮಗಳ ಭಾನಾತ್ಮಕ ಕ್ಷಣಗಳನ್ನು ಮನಮುಟ್ಟುವಂತೆ ತನ್ನ ಕ್ಯಾಮರದಲ್ಲಿ ಸೆರೆ ಹಿಡಿದಿದ್ದು, ನಿರ್ಣಯಕರು ಮೊದಲ ಪ್ರಶಸ್ತಿಯನ್ನು ನೀಡಿದ್ದಾರೆ.
ಮೂಲತಃ ಉಡುಪಿಯ ಕೊಡವೂರು ಮೂಲದವರಾಗಿರುವ ಅಶ್ವಿನ್ ಕೊಡವೂರು ತನ್ನ ವಿಭಿನ್ನ ಶೈಲಿಯ ಛಾಯಾಗ್ರಹಣದಿಂದಾಗಿ ಉಡುಪಿಯಲ್ಲಿ ಗುರುತಿಸಿಕೊಂಡಿರುವ ಛಾಯಾಗ್ರಾಹಕರಾಗಿದ್ದಾರೆ.