ಒಬ್ಬರೆ ವ್ಯಕ್ತಿಗೆ ಎರಡನೇ ಬಾರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಮಾರಂಭದ ಈ ಬಾರಿಯ ಪ್ರಶಸ್ತಿ ವಿತರಣಾ ಸಂದರ್ಭದ ಪ್ರಶಸ್ತಿ ವಿಜೇತರನ್ನು ಗುರುತಿಸುವಲ್ಲಿ ರಾಜಕಾರಣಿಗಳ ಒತ್ತಡದ ನಡುವೆ ಇಲಾಖೆ ಎಡವಟ್ಟು ಮಾಡಿಕೊಂಡು ಒಂದೇ ವ್ಯಕ್ತಿಗೆ ಎರಡೆರಡು ಬಾರಿ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.


.ಪದವಿನಂಗಡಿಯ ಜಾನಪದ ಕಲಾವಿದ ಪಂಬದ ಸಮುದಾಯದ ಭಾಸ್ಕರ ಬಂಗೇರ ಇವರಿಗೆ 2008ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು ಈ ಬಾರಿಯೂ ಕೂಡ ಇವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಅಚ್ಚರಿ ಮೂಡಿಸಿದೆ.
ಜಿಲ್ಲಾಡಳಿತದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯು ಎಷ್ಟು ಪಾರದರ್ಶಕವಾಗಿದೆ ,ಯಾವೆಲ್ಲ ಮಾನದಂಡಗಳನ್ನು ಬಳಸಿ ವ್ಯಕ್ತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂಬ ವಿಚಾರ ಈಗ ಪ್ರಶ್ನೆಯನ್ನು ಹುಟ್ಟುಹಾಕಿದೆ.

Related Posts

Leave a Reply

Your email address will not be published.