ಕದ್ರಿ ಮಂಜುನಾಥೇಶ್ವರನ ದರ್ಶನ ಪಡೆದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಸಮಾಜ ಕಲ್ಯಾಣ-ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇಂದು ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಂಜುನಾಥೇಶ್ವರನ ದರ್ಶನ ಪಡೆದರು. ಸಚಿವರಾದ ಮೊದಲ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಸಚಿವರು ಸರಕಾರ ಜನರಿಗೆ ಉತ್ತಮ ಆಡಳಿತ ನೀಡಿ ಇಲಾಖೆಯ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನೂ ಸಚಿವರಿಗೆ ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ಜೆ ಶೆಟ್ಟಿ ಹಾಗೂ ದ.ಕ ಜಿಲ್ಲೆಯ ಬಿಜೆಪಿ ಮಂಡಲದ ಅಧ್ಯಕ್ಷ ನಿತಿನ್ ಕುಮಾರ, ದೇವದಾಸ್, ನಿವೇದಿತಾ, ಪುರುಷೋತ್ತಮ, ದೇವಸ್ಥಾನದ ಆಡಳಿತ ನಿಯಂತ್ರಣ ಅಧಿಕಾರಿ ಗೋವಿಂದ ರಾಜ್ ಇನ್ನಿತರರು ಸಾಥ್ ನೀಡಿದರು.