ಕಾರ್ಕಳದಲ್ಲಿ ಕೃಷಿ ಮಸೂದೆ ವಿರೋಧಿಸಿ ಕಾಂಗ್ರೆಸ್ನಿಂದ ಪ್ರತಿಭಟನೆ
ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರೈತರು ಭಾರತ್ ಬಂದ್ಗೆ ಕರೆ ನೀಡಿದ್ದು, ಕಾರ್ಕಳದಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂತು. ಕಾರ್ಕಳ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರು ಬೆಳಿಗ್ಗೆ ಫುಲ್ ಕೆರಿ ವೃತ್ತದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಕಾರ್ಯದರ್ಶಿ ಸುಶಾಂತ್ ಸುಧಾಕರ್, ಜನವಿರೋಧಿ ರೈತ ವಿರೋಧಿ ಸರ್ಕಾರದ ಆಡಳಿತದಿಂದ ಜನಸಾಮಾನ್ಯ ರು ಕಂಗಾಲಾಗಿದ್ದಾರೆ. ನಿರಂತರ ಬೆಲೆಯೇರಿಕೆಯಿಂದ, ನಿರುದ್ಯೋಗದ ಸಮಸ್ಯೆಯಿಂದ ಜನರು ಹತಾಶರಾಗಿದ್ದಾರೆ. ನಂಜನಗೂಡಿನಲ್ಲಿ ಕಾರ್ಮಿಕರ ಕಾರ್ಖಾನೆ ಗಳನ್ನು ಸರಕಾರ ಧ್ವಂಸ ಮಾಡಿದೆ. ಆದಷ್ಟು ಬೇಗ ಭ್ರಷ್ಟ ಸರಕಾರವನ್ನು ಕಿತ್ತು ಎಸೆಯಬೇಕು ಎಂದು ಹೇಳಿದರು. ಕಾರ್ಕಳದಲ್ಲಿ ಬಸ್ಸು ಸಂಚಾರ ಸುಗಮ ವಾಗಿದ್ದು ಶಾಲಾ ಕಾಲೇಜು ವ್ಯಾಪಾರ-ವಹಿವಾಟು ಎಂದಿನಂತೆ ಇರುವುದು ಕಂಡುಬಂತು.