ಕೊರೋನಾದೊಂದಿಗೆ ಬದುಕುಲು ಸಿಂಗಾಪುರ ನಿರ್ಧಾರ:ಎಲ್ಲಾ ನಿಯಮಾವಳಿಗಳನ್ನು ಕೈಬಿಡಲು ತೀರ್ಮಾನ
ಸಿಂಗಾಪುರ ದೇಶವು ಕೊರೋನಾವನ್ನು ಸಂಪೂರ್ಣ ನಿಯಂತ್ರಿಸುವ ಬಗ್ಗೆ ಆದ್ಯತೆ ನೀಡುವ ಬದಲು ಕೊರೋನಾದೊಂದಿಗೆ ಬದುಕುವ ಬಗ್ಗೆ ಅಧಿಕೃತ ನಿರ್ಧಾರಕ್ಕೆ ಬಂದಿದೆ.ಕೊರೋನಾಗೆ ಸಂಬಧಿಸಿದಂತೆ ಇದುವರೆಗೆ ಜಾರಿಯಲ್ಲಿದ್ದ ಎಲ್ಲಾ ನಿಯಾಮವಳಿಗಳನ್ನು ತೆರವುಗೊಳಿಸಲು ಸಿಂಗಾಪುರ ನಿರ್ಧರಿಸಿದೆ. ಇನ್ನು ಮುಂದೆ ಕೊರೋನಾ ಪ್ರಕರಣವನ್ನು ಸಂಪೂರ್ಣ ಶೂನ್ಯವಾಗಿರುವ ಬಗ್ಗೆ ನಮ್ಮ ಆದ್ಯತೆ ಇರುವುದಿಲ್ಲ, ಬದಲಿಗೆ ಕೊರೋನಾದೊಂದಿಗೆ ಬದುಕುವುದು ನಮ್ಮ ಆದ್ಯತೆಯಾಗಲಿದೆ ಎಂದು ಸಿಂಗಾಪುರದ ವಾಣಿಜ್ಯ ಸಚಿವರು, ಹಾಗೂ ವಿತ್ತ ಸಚಿವರು ಹಾಗೂ ಆರೋಗ್ಯ ಸಚಿವರು ಜಂಟಿಯಾಗಿ ಈ ಬಗ್ಗೆ ಸಿಂಗಾಪುರುದ ಸ್ಟ್ರೈಟ್ಸ್ ಟೈಮ್ಸ್ ಪತ್ರಿಕೆಯ ಘೋಷಿಸಿದ್ದಾರೆ.
ಕೊರೋನಾ ಎಂದಿಗೂ ನಮ್ಮನ್ನು ಬಿಟ್ಟು ಹೋಗದು ಎಂಬುದು ಕಟು ಸತ್ಯವಾಗಿದೆ , ಆದರೆ ಕೊರೋನಾದ ಜೊತೆಗೆ ಬದುಕುಬಹುದೆಂಬದು ವಾಸ್ತವ ಸತ್ಯವಾಗಿದೆ ಎಂದು ಈ ಮೂರು ಮಂದಿ ಸಚಿವರು ಪ್ರತಿಪಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಂಗಾಪುರ ಸರಕಾರವು ಕೊರೋನಾವನ್ನು ಮುಂದಿನ ದಿನಗಳಲ್ಲಿ ಇತರ ಸಾಮಾನ್ಯ ಜ್ವರದಂತೆ ಪರಿಗಣಿಸಲು ತೀರ್ಮಾನಿಸಿದೆ. ಮಾತ್ರವಲ್ಲದೆ ಎಲ್ಲಾ ಕಡ್ಡಾಯ ನಿಯಾಮವಳಿಗಳನ್ನು ರದ್ಧು ಮಾಡಲು ತೀರ್ಮಾನಿಸಿದೆ. ಇನ್ನು ಮುಂದಕ್ಕೆ ಪ್ರವಾಸಿಗರಿಗೆ ಪ್ರತ್ಯೇಕ ಕ್ವಾರಂಟೈನ್ ಇರುವುದಿಲ್ಲ, ಕೊರೋನಾ ಸೋಂಕು ತಗಲಿದವರ ನಿಕಟವರ್ತಿಗಳನ್ನು ಪ್ರತ್ಯೇಕಗೊಳಿಸುವಂತಹ ಕಾರ್ಯ ನಡೆಸುವುದಿಲ್ಲ, ಪ್ರತಿನಿತ್ಯ ಕೊರೋನಾ ಸೋಂಕಿತರ ಅಂಕಿ ಅಂಶವನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆಯನ್ನು ಕೂಡ ಕೈಬಿಡಲಾಗುವುದು ಎಂದು ಸಿಂಗಾಪುರ ಸ್ಥಳೀಯಾಡಳಿತ ಪ್ರಕಟಿಸಿದೆ. ಒಟ್ಟಿನಲ್ಲಿ ಕೊರೋನಾ ಪ್ರಕರಣವನ್ನು ಸಂಪೂರ್ಣವಾಗಿ ಶೂನ್ಯವಾಗಿಸುವುದಕ್ಕಿಂತ ಹೆಚ್ಚಾಗಿ ಕೊರೋನಾದೊಂದಿಗೆ ಬದುಕುವ ಬಗ್ಗೆ ನಮ್ಮ ಆದ್ಯತೆಯಾಗಿದೆ ಎಂದು ಸಿಂಗಾಪುರ ನಿರ್ಧಾರಕ್ಕೆ ಬಂದಿದೆ.