ಕೋವಿಡ್ ನಿಯಮ ಪಾಲಿಸಿಕೊಂಡು ದೇವರ ದರ್ಶನ ಪಡೆದ ಭಕ್ತಾದಿಗಳು
ಇಂದಿನಿಂದ ರಾಜ್ಯದಾದ್ಯಂತ ಬಹುತೇಕ ಲಾಕ್ಡೌನ್ ಸಡಿಲಿಕೆಯಾಗಿದೆ. ಎರಡು ತಿಂಗಳುಗಳಿಂದ ಭಕ್ತಾದಿಗಳಿಗೆ ಮುಚಿದ್ದ ದೇವಸ್ಥಾನಗಳು ತೆರೆದಿದ್ದು. ಕರಾವಳಿಯಲ್ಲಿ ವಿವಿಧ ದೇವಸ್ಥಾನಗಳಿಗೆ ಭಕ್ತ ಸಾಗರ ಹರಿದಿ ಬಂದಿದ್ದು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಸಮಾರು ಎರಡು ತಿಂಗಳುಗಳ ಕಾಲ ಲಾಕ್ಡೌನ್ನಿಂದಾಗಿದೆ ಭಕ್ತಾದಿಗಳಿಗೆ ಮುಚ್ಚಿದ್ದ ದೇವಸ್ಥಾನಗಳು ಇಂದು ತರೆದಿವೆ. ಸರ್ಕಾರದ ಆದೇಶದಂತೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಾದ ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು.
ಇಂದು ಮುಂಜಾನೆ ಭಕ್ತ ಸಾಗರ ಹರಿದು ಬಂದಿದೆ. ರಾಜ್ಯದ ವಿವಿದೆಡೆಗಳಿಂದ ಆಗಮಿಸುತ್ತಿರುವ ಎಲ್ಲಾ ರೀತಿಯ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು.