ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್‌ಗೆ ’ಸಿದ್ಧಗಂಗಾ ಶ್ರೀ ರಾಜ್ಯ ಪ್ರಶಸ್ತಿ’

ಮಂಗಳೂರು: ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸೊಸೈಟಿ ಬೆಂಗಳೂರು ಹಾಗೂ ಜ್ಞಾನ ಮಂದಾರ ಟ್ರಸ್ಟ್ (ರಿ) ಬೆಂಗಳೂರು ಇದರ ನೇತೃತ್ವದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಕ್ರೀಡಾ ಬರವಣಿಗೆಗಾಗಿ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಪ್ರತಿಷ್ಠಿತ ’ ಸಿದ್ಧಗಂಗಾ ಶ್ರೀ ರಾಜ್ಯ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.

ಜಗದೀಶ್ಚಂದ್ರ ಅಂಚನ್ ಸುಮಾರು 30 ವರ್ಷಗಳಿಂದ ಕ್ರೀಡಾ ಅಂಕಣ ಹಾಗೂ ಕ್ರೀಡಾ ಲೇಖನಗಳ ಮೂಲಕ ರಾಜ್ಯ, ಅಂತರ್ ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಹಾಗೂ ವಾರಪತ್ರಿಕೆಗಳಲ್ಲಿ ಗುರುತಿಸಿಕೊಂಡಿದ್ದು, ಇವರು ಬರೆದ ಸುಮಾರು 4೦೦೦ಕ್ಕೂ ಮಿಕ್ಕಿದ ಕ್ರೀಡಾ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಇವರು ’ವಿಶ್ವಕಪ್ ಕ್ರಿಕೆಟ್ ಸಮರ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.

ಕ್ರೀಡಾ ಬರವಣಿಗೆಗಾಗಿ ಇವರಿಗೆ 2013ರಲ್ಲಿ ’ಮೀಡಿಯಾ ಅವಾರ್ಡ್ ’, 2014ರಲ್ಲಿ ’ಸಮಾಜ ರತ್ನ ’ರಾಜ್ಯ ಪ್ರಶಸ್ತಿ, 2016ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ; ಜಾನಪದ ಕ್ರೀಡೆಗಳ ಬಗ್ಗೆ ಇವರು ಬರೆದ ಕ್ರೀಡಾ ಲೇಖನಗಳಿಗಾಗಿ 2019ರ ಜಾನಪದ ಲೋಕ ರಾಜ್ಯ ಪ್ರಶಸ್ತಿ, ನಮ್ಮ ಕುಡ್ಲ ಸಾಧಕ ಪ್ರಶಸ್ತಿ, 2020ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ’ಕೆ.ಎ.ನೆಟ್ಟಕಲಪ್ಪ ರಾಜ್ಯ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ಹಾಗೂ ಸನ್ಮಾನ ಪುರಸ್ಕಾರಗಳನ್ನು ಇವರು ಪಡೆದಿದ್ದಾರೆ.

Related Posts

Leave a Reply

Your email address will not be published.