ಗದ್ದೆಗಿಳಿದ ಚಿತ್ರನಟ ರಕ್ಷಿತ್ ಶೆಟ್ಟಿ
ಉಡುಪಿಯ ವಾರಂಬಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ರಮದಲ್ಲಿ ಚಿತ್ರನಟ ರಕ್ಷಿತ್ ಶೆಟ್ಟಿ ಭಾಗಿಯಾದರು. ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಪ್ರತಿಷ್ಠಾನದ ಸಂಯೋಜನೆಯಲ್ಲಿ ಕೃಷಿ ಕಾರ್ಯ ಆಯೋಜಿಸಲಾಗಿತ್ತು.
ಬ್ರಹ್ಮಾವರ ತಾಲೂಕು ವ್ಯಾಪ್ತಿಯ ವಾರಂಬಳ್ಳಿ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ನಟ ರಕ್ಷಿತ್ ಶೆಟ್ಟಿ, ಶಾಸಕ ರಘುಪತಿ ಭಟ್ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ಭೂ ಮಾತೆಗೆ ಹಾಲನ್ನು ಅರ್ಪಿಸಿ ಗದ್ದೆಗಿಳಿದು ನೇಜಿ ನೆಟ್ಟು ಚಾಲನೆ ನೀಡಿದರು. ಬಳಿಕ ಗದ್ದೆಗಿಳಿದು ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟು ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸಿದರು.