HomeFresh Newsದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕುಂದಾಪುರ ಶಾಖೆ ಸ್ಥಳಾಂತರ; ಆ.28ರಂದು ನೂತನ ಕಚೇರಿ ಉದ್ಘಾಟನೆ

ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕುಂದಾಪುರ ಶಾಖೆ ಸ್ಥಳಾಂತರ; ಆ.28ರಂದು ನೂತನ ಕಚೇರಿ ಉದ್ಘಾಟನೆ

ಕುಂದಾಪುರ: ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., ಉಡುಪಿ ಇದರ ಕುಂದಾಪುರ ಶಾಖೆಯನ್ನು ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ತೆಯಲ್ಲಿರುವ ಧ್ರುವ ಕಾಂಪ್ಲೆಕ್ಸ್‌ನ ಮೊದಲ ಮಹಡಿಗೆ ಸ್ಥಳಾಂತರಿಸಲಾಗುತ್ತಿದ್ದು, ನೂತನ ಹವಾನಿಯಂತ್ರಿತ ಕಚೇರಿಯ ಉದ್ಘಾಟನಾ ಸಮಾರಂಭ ಆ.28ರಂದು ಶುಕ್ರವಾರ ನಡೆಯಲಿದೆ.
ಧ್ರುವ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಕಚೇರಿ ಉದ್ಘಾಟನೆ, ಭದ್ರತಾ ಕೊಠಡಿ ಉದ್ಘಾಟನೆ ಹಾಗೂ ಠೇವಣಿ ಪತ್ರ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.


ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿಯ ಅಧ್ಯಕ್ಷ ಯು. ಸತೀಶ್ ಶೇಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು ವ್ಯವಸ್ಥಾಪನ ಸಮಿತಿ ಸದಸ್ಯ ಯು. ರಾಜೇಶ್ ಕಾರಂತ್, ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಎಸ್., ಉದಯ ಜ್ಯುವೆಲ್ಲರ್ಸ್ ಮಾಲಕ ಎಸ್.ಆರ್. ಉದಯ್ ಕುಮಾರ್ ಶೇಟ್, ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನ ಕುಂದಾಪುರದ ಆಡಳಿತ ಧರ್ಮದರ್ಶಿ ಗೋಕುಲ್ ಶೇಟ್ ಹಾಗೂ ಧ್ರುವ ಕಾಂಪ್ಲೆಕ್ಸ್‌ನ ಮಾಲಕ ರಾಮ್ ಪ್ರಸಾದ್ ಶೇಟ್ ಭಾಗವಹಿಸಲಿದ್ದಾರೆ.
ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರ್. ಮೋಹನ್ ರಾವ್, ಉಪಾಧ್ಯಕ್ಷ ಎಸ್. ಶ್ರೀ ಸುಬ್ರಹ್ಮಣ್ಯ ಶೇಟ್ ಮಹೇಶ್ ಶೇಟ್, ಶಾಖಾ ವ್ಯವಸ್ಥಾಪಕರು,
ಆಡಳಿತ ಮಂಡಳಿಯ ನಿರ್ದೇಶಕರಾದ ಕೆ. ಶಿವಶಂಕರ್ ಶೇಟ್, ಜಿ. ಮಂಜುನಾಥ್ ಶೇಟ್, ಯು. ಗಿರೀಶ್ ಶೇಟ್, ಎನ್. ಕೃಷ್ಣಮೂರ್ತಿ ಶೇಟ್, ಎನ್. ಸತ್ಯನಾರಾಯಣ ಶೇಟ್, ಯು. ರಾಮ್ ಶೇಟ್, ಚಂದ್ರಶೇಖರ್ ಎನ್. ಶೇಟ್, ರಶ್ಮಿ ಶೇಟ್ ಎಸ್., ಮಾಧವಿ ಎಂ. ಶೇಟ್ ಹಾಗೂ ಬಿ. ಸತ್ಯನಾರಾಯಣ ಶೇಟ್ ಹಾಗೂ ಸಿಬ್ಬಂದಿಗಳು
ಸ್ಥಳಾಂತರ ಮತ್ತು ಹವಾನಿಯಂತ್ರಿತ ಕಚೇರಿಯ ಉದ್ಘಾಟನಾ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments