ಟೋಕಿಯೋ ಒಲಿಂಪಿಕ್ಸ್ :ಕುಸ್ತಿಯಲ್ಲಿ ರವಿಕುಮಾರ್ಗೆ ಬೆಳ್ಳಿ ಪದಕ
ಟೋಕಿಯೊ ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಫೈನಲ್ನಲ್ಲಿ ಸೋಲು ಅನುಭವಿಸಿರುವ ಭಾರತದ ರವಿಕುಮಾರ್ ದಹಿಯಾ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.ಗುರುವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ ರವಿಕುಮಾರ್, ವಿಶ್ವ ಚಾಂಪಿಯನ್, ರಷ್ಯಾದ ಜವೂರ್ ಉಗುವೆ ಎದುರು ಸೋಲು ಅನುಭವಿಸಿದರು.
ರವಿ ಬೆಳ್ಳಿ ಗೆಲ್ಲುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವು 2 ಬೆಳ್ಳಿ ಹಾಗೂ 3 ಕಂಚು ಸಹಿತ ಒಟ್ಟು 5 ಪದಕ ಗೆದ್ದಂತಾಗಿದೆ.ರವಿ ಕುಮಾರ್ ಒಲಿಂಪಿಕ್ಸ್ ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಎರಡನೇ ಕುಸ್ತಿಪಟುವಾಗಿದ್ದಾರೆ. ಈ ಹಿಂದೆ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸುಶೀಲ್ ಕುಮಾರ್ ಈ ಸಾಧನೆ ಮಾಡಿದ್ದರು.
ದಹಿಯಾ ಅವರು ಕೆಡಿ ಜಾಧವ್, ಸುಶೀಲ್ ಕುಮಾರ್, ಯೋಗೇಶ್ವರ ದತ್ತ ಹಾಗೂ ಸಾಕ್ಷಿ ಮಲಿಕ್ ಬಳಿಕ ಒಲಿಂಪಿಕ್ಸ್ ಪದಕ ಗೆದ್ದಿರುವ ಭಾರತದ 5ನೇ ಕುಸ್ತಿಪಟು ಆಗಿದ್ದಾರೆ.