ಪಡುಬಿದ್ರಿ: ಅಕ್ಕಿ ಸಾಗಾಟ ಪಿಕಪ್ ವಾಹನ ಪಲ್ಟಿ: ಚಾಲಕ ಅಪಾಯದಿಂದ ಪಾರು
ಕೋಟೇಶ್ವರದಿಂದ ಮಂಗಳೂರಿಗೆ ಅಕ್ಕಿ ಸಾಗಿಸುತ್ತಿದ್ದ ಪಿಕಪ್ ವಾಹನವೊಂದರ ಟಯರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದು ಕೊಂಡು ಪಲ್ಟಿಯಾಗಿದ್ದು ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.
ಟೈಗರ್ ಬ್ರಾಂಡ್ ಅಕ್ಕಿ ಹೇರಿಕೊಂಡು ಬರುತ್ತಿದ್ದು ಇದ್ದಕ್ಕಿದಂತೆ ಟಯರ್ ಸ್ಫೋಟಗೊಂಡು ರಸ್ತೆಗೆ ಉರುಳಿ ಬಿದ್ದಿದೆ. ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಸಂಚರಿಸದಿರುವುದರಿಂದ ಬಾರೀ ದುರಂತವೊಂದು ತಪ್ಪಿದೆ ಎನ್ನುತ್ತಾರೆ ಅಪಘಾತಕ್ಕೊಳಗಾದ ಪಿಕಪ್ ಚಾಲಕ. ಅಕ್ಕಿ ಚೀಲಗಳು ಹೊಡೆದು ಹೋಗಿ ಅಕ್ಕಿ ರಸ್ತೆ ಎಲ್ಲೆಡೆ ಚೆಲ್ಲಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ರಸ್ತೆಗಡ್ಡವಾಗಿ ಉರುಳಿದ ವಾಹನ ತೆರವು ಕಾರ್ಯ ನಡೆಸಿದ್ದಾರೆ.