ಪುತ್ತೂರಿನ ಕಬಕದಲ್ಲಿ ಸರಣಿ ಕಳ್ಳತನ
ಪುತ್ತೂರು : ಕಬಕ ಪೇಟೆಯಲ್ಲಿ ನ.15 ರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕಬಕ ರೋಟರಿ ಕಟ್ಟಡ ದಲ್ಲಿರುವ ಹೋಟೆಲ್ ವಿಜಿ ಹಾಗೂ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿರುವ ಕಬಕ ಜನರಲ್ ಸ್ಟೋರ್ ನಿಂದ ನಗದು ಮತ್ತು ಸೊತ್ತುಗಳು ಕಳವಾಗಿದೆ.
ರೋಲಿಂಗ್ ಶಟರ್ ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಾಗೂ ಚಿಲ್ಲರೆ ಸಾಮಗ್ರಿಗಳನ್ನು ಕಳವು ಗೈದಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ಗ್ಯಾರೇಜಿಗೂ ಕಳ್ಳರು ನುಗ್ಗಿದ್ದಾರೆಂದು ತಿಳಿದು ಬಂದಿದೆ. ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅಂಗಡಿ ಜಗಳಿಯಲ್ಲಿ ಬಿಸ್ಕೆಟ್ ಕಟ್ಟುಗಳು ಪತ್ತೆ: ಕಬಕ ಜನರಲ್ ಸ್ಟೋರ್ ನಿಂದ ಕಳವು ಮಾಡಿದ ಬಿಸ್ಕೆಟ್ ಮತ್ತು ಚಾಕಲೇಟ್ ಪ್ಯಾಕ್ ಗಳನ್ನು ಪಕ್ಕದ ಅಂಗಡಿಯ ಜಗಳಿಯಲ್ಲಿ ಬಿಟ್ಟು ಹೋಗಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ: ಕಳವು ನಡೆದಿರುವ ಅಂಗಡಿಗಳಿಗೆ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಭೇಟಿ ನೀಡಿದ್ದಾರೆ.