Home Posts tagged #Theft

ಪಡುಬಿದ್ರಿ: ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳ: ಸ್ಕೂಟರ್ ಬಿಟ್ಟು ಪಲಾಯಣ

ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೋಯ್ಯದಿದ್ದಾರೆ. ಹೆದ್ದಾರಿ ಪಕ್ಕದ ಬಾಡಿಗೆ ರೂಮ್‌ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್‌ಗೆ ಬೀಗ ಹಾಕಿ ಊರಿಗೆ ಹೋಗಿದ್ದು, ಭಾನುವಾರ ಮುಂಜಾನೆ ೫-೩೦ರ

ಪುತ್ತೂರಿನ ಕಬಕದಲ್ಲಿ ಸರಣಿ ಕಳ್ಳತನ

ಪುತ್ತೂರು : ಕಬಕ ಪೇಟೆಯಲ್ಲಿ ನ.15 ರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕಬಕ ರೋಟರಿ ಕಟ್ಟಡ ದಲ್ಲಿರುವ ಹೋಟೆಲ್ ವಿಜಿ ಹಾಗೂ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿರುವ ಕಬಕ ಜನರಲ್ ಸ್ಟೋರ್ ನಿಂದ ನಗದು ಮತ್ತು ಸೊತ್ತುಗಳು ಕಳವಾಗಿದೆ. ರೋಲಿಂಗ್ ಶಟರ್ ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಾಗೂ ಚಿಲ್ಲರೆ ಸಾಮಗ್ರಿಗಳನ್ನು ಕಳವು ಗೈದಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ಗ್ಯಾರೇಜಿಗೂ ಕಳ್ಳರು ನುಗ್ಗಿದ್ದಾರೆಂದು ತಿಳಿದು ಬಂದಿದೆ. ಪುತ್ತೂರು ನಗರ ಠಾಣಾ ಪೊಲೀಸರು

ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಬಳಿಯ ಮನೆಗೆ ಕಳ್ಳರ ಲಗ್ಗೆ, ನಗ, ನಗದು ಕಳವು

ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಪಕ್ಕದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದು 12 ಸಾವಿರ ನಗದು ಮತ್ತು ಎರಡು ಗ್ರಾಂ ಚಿನ್ನದ ಆಭರಣ ಕದ್ದೊಯ್ದ ಘಟನೆ ನಡೆದಿದೆ. ಉಚ್ಚಿಲದ ನಿವಾಸಿ ಅಬ್ದುಲ್ ಮಲೀಕ್‌ನವರ ಬೈತುಲ್ ಅಲ್ ಸಫಾ ಮನೆಗೆ ಹಿಂಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು, ತಳ ಮಹಡಿ ಮತ್ತು ಮೇಲ್ಮಹಡಿಯ ಎರಡೂ ಕಡೆಗಳ ಬೀಗ ಮುರಿದು ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ 12 ಸಾವಿರ ರುಪಾಯಿ ನಗದು ಹಾಗೂ 2ಗ್ರಾಂ

ಮಂಗಳೂರಲ್ಲಿ ಮಹಿಳೆಯ ಚಿನ್ನದ ಸರ ಎಳೆದು ದುಷ್ಕರ್ಮಿ ಪರಾರಿ

ಮಂಗಳೂರಿನ ಯೆಯ್ಯಾಡಿಯ ಬಾರೆಬೈಲ್‌ನಲ್ಲಿ ನಡೆದು ಹೋಗುತ್ತಿದ್ದ ವಿ೪ನ್ಯೂಸ್‌ನ ಪತ್ರಕರ್ತೆ ಕಾವ್ಯ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಯೋರ್ವ ಎಳೆದು ಪರಾರಿಯಾದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ವೇಳೆ ಕಚೇರಿಯಿಂದ ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ. ದುಷ್ಕರ್ಮಿಯೋರ್ವ ಬೈಕ್‌ನಲ್ಲಿ ಆಗಮಿಸಿ, ಆಕೆಯ ಕುತ್ತಿಯಲ್ಲಿದ್ದ ಚಿನ್ನದ ಸರವನ್ನ ದೋಚಿ ಪರಾರಿಯಾಗಿದ್ದಾನೆ. ಸರವನ್ನು ಎಳೆಯುವ ಸಂದರ್ಭದಲ್ಲಿ ರಸ್ತೆಗೆ ಉರುಳಿ ಬಿದ್ದು

ಕೊಲ್ಯದಲ್ಲಿ ಎರಡು ಮನೆಗಳಿಂದ ಕಳವಿಗೆ ಯತ್ನ

ಉಳ್ಳಾಲ: ಎರಡು ಮನೆಗಳಿಗೆ ಬಾಗಿಲು ಮುರಿದು ನುಗ್ಗಿದ ಕಳ್ಳರ ತಂಡ, ಮನೆಯೊಳಗಿದ್ದ ಸೊತ್ತುಗಳನ್ನು ಹಾನಿಗೈದು ಒಂದು ಮನೆಯಿಂದ ವಾಚ್ ಕಳವುಗೈದು ಪರಾರಿಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಮೂಕಾಂಬಿಕಾ ದೇವಸ್ಥಾನ ಬಳಿ ವೇಳೆ ನಡೆದಿದೆ. ವಿದೇಶದಲ್ಲಿ ನೆಲೆಸಿರುವ ಸುರೇಶ್ ಎಂಬವರಿಗೆ ಸೇರಿದ ಮನೆಯ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕಪಾಟು ಪುಡಿಗೈದು, ಮನೆಯೊಳಗಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೈದು ಹಣ ಹಾಗೂ ಒಡವೆಗಾಗಿ ಹುಡುಕಾಡಿ ಏನೂ ಸಿಗದೇ