ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆಯಿತು ಮಹಿಳೆಯ ಅಂಗಾಂಗ ದಾನ

ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರೀಯಗೊಂಡ ಮಹಿಳೆಯ ಅಂಗಾಂಗವನ್ನು ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದು, ಇಂದು ವೈದ್ಯರು ಅಂಗಾಂಗವನ್ನು ಬೇರ್ಪಡಿಸಿ ಚೆನೈ, ಬೆಂಗಳೂರು, ಮತ್ತು ಮಣಿಪಾಲ ಮತ್ತು ಮಂಗಳೂರು ಆಸ್ಪತ್ರೆಗೆ ರವಾನಿಸುವ ಕಾರ್ಯ ನಡೆಯಿತು.

ಈ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಉದಯ್ ಕುಮಾರ್ ಕೆ ಅವರು ಮಾಹಿತಿ ನೀಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಕಿನ್ನಿಗೋಳಿ ನಿವಾಸಿ ಲಿಂಡಾ ಶರಲ್ ಡಿಸೋಜ ಅವರು ರಕ್ತದ ಒತ್ತಡ ಸಮಸ್ಯೆಯಿಂದ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಫಿಶೀಸಿಯನ್ ಡಾ ವೆಂಕಟೇಶ್ ಅವರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದರು.ಲಿಂಡಾ ಶರಲ್ ಡಿಸೋಜಾ ಅವರು ತಲೆನೋವೆಂದು ಜುಲೈ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾರಣ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆನಂತರ ಸಿಟಿ ಸ್ಕ್ಯಾನ್ ಮೂಲಕ ಪರೀಕ್ಷೆಗೆ ಒಳಪಡಿಸಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ದೃಢಪಟ್ಟಿತ್ತು. ಉಸಿರಾಟದಲ್ಲಿ ತೊಂದರೆಯಿದ್ದ ಕಾರಣ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಲಿಂಡಾ ಶರಲ್ ಡಿಸೋಜಾ ಎಂಬವರ ಆರೋಗ್ಯ ಸ್ಥಿತಿ 2-3 ದಿನದಲ್ಲಿ ಹದಗೆಡುತ್ತಾ ಬಂದಿತ್ತು.

ಮಹಿಳೆಯ ಮೆದುಳು ನಿಷ್ಕ್ರಿಯಗೊಂಡ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರಾದ ಡಾ. ಬಿ ಎಂ ವೆಂಕಟೇಶ್, ನ್ಯೂರೋಲಜಿಸ್ಠ್ ಡಾ. ರಾಘವೇಂದ್ರ, ನ್ಯುರೋ ಸರ್ಜನ್ ಜೋವರ್ ಲೋಬೋ, ಕಿಡ್ನಿ ತಜ್ಞರಾದ ಮಂಜುನಾಥ್ ಜೆ ಖಾತ್ರಿ ಪಡಿಸಿ ಲಿಂಟಾ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ರು. ಆಸ್ಪತ್ರೆಯ ವೈದ್ಯರ ಸಲಹೆಯಂತೆ ಲಿಂಡಾ ಸಹೋದರಾದ ಸಂತೋಷ್ ಪ್ರಕಾಶ್ ಡಿಸೋಜ, ಲಾನ್ಸಿ ಪ್ರಕಾಶ್ ಡಿಸೋಜ ಆವರ ಸ್ವ ಒಪ್ಪಿಗೆ ಮೇರೆಗೆ ರೋಗಿಯ ಸಂಪೂರ್ಣ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.

ವೈದ್ಯರಾದ ಡಾ. ವೆಂಕಟೇಶ್, ಡಾ. ರಾಘವೇಂದ್ರ, ಡಾ. ಜೇವರ್ ಲೋಬೋ, ಡಾ. ಮಂಜುನಾಥ್ ಅವರು ಅಂಗಾಂಗ ಬೇರ್ಪಡಿಸುವ ಕಾರ್ಯವನ್ನು ನೆರವೇರಿಸಿದ್ದಾರೆ. ಚೆನ್ನೈನ ಎಂಜಿಎಂ ಆಸ್ಪತ್ರೆ, ಬೆಂಗಳೂರು ಆಸ್ಪತ್ರೆ, ಮಂಗಳೂರಿನ ಏಜೆ ಆಸ್ಪತ್ರೆ ಮತ್ತು ಮಣಿಪಾಲದ ಆಸ್ಪತ್ರೆಗೆ ಹೃದಯ, ಶ್ವಾಸಕೋಶ, ಕಿಡ್ನಿ ಚರ್ಮಗಳು ದಾನ ಮಾಡಲಾಗಿದೆ.ವಿಮಾನದಲ್ಲಿ ಬೆಂಗಳೂರು, ಚೆನ್ನೈಗೆ ಹೋಗಲಿದೆ. ದೇಹದ ಅಂಗಾಂಗದಿಂದ ಆರು ಜನರ ಜೀವ ಉಳಿಯಲಿದೆ. ಅಂಗಾಂಗ ದಾನ ಮಾಡಿ ಬೇರೆಯವರ ಜೀವ ಉಳಿಸುವ ಕಾರ್ಯ ಮಹತ್ತರವಾದದು ಎಂದು ಹೇಳಿದರು.

 

Related Posts

Leave a Reply

Your email address will not be published.