ಮನು ಬಳಿಗಾರರ ಬೆಂಬಲ ಕೋರಿದ ಮಾಲಿಪಾಟೀಲ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಮನು ಬಳಿಗಾರ ಅವರನ್ನು ಭೇಟಿ ಮಾಡಿದ ರಾಜ್ಯ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಅವರು ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು.
ಭಾನುವಾರ ಗದಗ ಜಿಲ್ಲೆಯ ಬಳಿಗಾರರ ಹುಟ್ಟೂರು ಶಿಗ್ಲಿಯ ಮನೆಯಲ್ಲಿ ಭೇಟಿ ಮಾಡಿದ ಶೇಖರಗೌಡರು, ಚುನಾವಣೆ ಪ್ರಕ್ರಿಯೆ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಶರಣು ಗೋಗೇರಿ, ಕೊಪ್ಪಳ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಅಂಗಡಿ, ಅಂದಾನಪ್ಪ ವಿಭೂತಿ, ಮಹಾಂತೇಶ ನಿಲೋಗಲ್, ನೃಪತುಂಗ ಬಳಿಗಾರ, ಮೈಕೋ ಶಿವಕುಮಾರ್ ಇದ್ದರು.