ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರು ದಿ.ಪ್ರವೀಣ್ ನೆಟ್ಟಾರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಪ್ರವೀಣ್ ತಂದೆ ಶೇಖರ ಪೂಜಾರಿ ,ತಾಯಿ ಲೀಲಾವತಿ ಮತ್ತು ಪತ್ನಿ ಶ್ರೀಮತಿ ನೂತನ ಪ್ರವೀಣ್ ರವರು ಮಾಲಾರ್ಪಣೆ ಮಾಡಿ ಬಳಿಕ ಪುಷ್ಪಾರ್ಚನೆ ಮಾಡಿದರು.
ನಂತರ ನಿವೃತ್ತ ಯೋಧ ಮಾಧವ ಪೂಜಾರಿ ಕೆಂಗುಡೇಲುರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ ಯಾವುದೇ ಅನ್ಯಾಯ ಮಾಡದೆ ಪ್ರವೀಣ್ ಕೊಲೆಯಾಗಿದೆ. ಕೊಲೆಗೈದ ದುಷ್ಕರ್ಮಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹೇಳಿ ಪ್ರವೀಣ್ ಕುಟುಂಬದ ಜೊತೆ ಸದಾ ನಾವಿದ್ದೇವೆ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿದರು.
ಸತೀಶ್ ಕುಂಪಲರವರು ಮಾತನಾಡಿ ಪ್ರವೀಣ್ ರವರು ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.ಇವರು ಸಮಾಜಕ್ಕೆ ಪ್ರೇರಣೆ ಆಗುವ ರೀತಿಯಲ್ಲಿ ಕೆಲಸ ಮಾಡಿದವರು.ಇವರ ಕುಟುಂಬದ ಜೊತೆ ಇರುವುದು ನಮ್ಮ ಜವಾಬ್ದಾರಿ.ಸಮಾಜ ಘಾತುಕ ಕೆಲಸ ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದು ಹೇಳಿದರು.

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲುರವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ,ಸುಳ್ಯ ಬಿಜೆಪಿ ಪ್ರಭಾರಿ ಪ್ರಸನ್ನ ಮಾರ್ತ,ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ವಕ್ತಾರ ಜೀವನ್ ತೊಕ್ಕೊಟ್ಟು, ಪ್ರಸನ್ನ ದರ್ಬೆ, ಸುಳ್ಯ ಮಂಡಲ ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ,ಬೆಳ್ಳಾರೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಜಿತ್ ರಾವ್ ಕಿಲಂಗೋಡಿ,ಕಾರ್ಯದರ್ಶಿ ಅನೂಪ್ ಬಿಳಿಮಲೆ, ಶಕ್ತಿಕೇಂದ್ರದ ಪ್ರಮುಖ್ ದಿಲೀಪ್ ಗಟ್ಟಿಗಾರು,ನೆಟ್ಟಾರು ಬೂತ್ ಸಮತಿ ಅಧ್ಯಕ್ಷ ಪ್ರವೀಣ್ ಚಾವಡಿಬಾಗಿಲು,ಓಬಿಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ,
ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ, ಸುಳ್ಯ ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ನಿಖಿಲ್ ಮಡ್ತಿಲ,ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಕೊಲ್ಲರಮೂಲೆ,ದಿವಾಕರ ಕುಂಬಾರ,ಉಪಾಧ್ಯಕ್ಷ ಲತೀಶ್ ಗುಂಡ್ಯ, ಶೇಖರ ಪೂಜಾರಿ, ಶೈಲೇಶ್ ನೆಟ್ಟಾರು,ಭಾಸ್ಕರ ಚಾವಡಿಬಾಗಿಲು ಹಾಗು ಪ್ರವೀಣ್ ನೆಟ್ಟಾರು ಮನೆಯವರು, ಕುಟುಂಬಸ್ಥರು ಉಪಸ್ಥಿತರಿದ್ದು ಪ್ರವೀಣ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.


