ಯುನಿವರ್ಸಿಟಿ ಸಂಧ್ಯಾ ಕಾಲೇಜಿನಲ್ಲಿ  ತುಳು ಎಂಎ ಪ್ರವೇಶಾತಿ ಆರಂಭ

ಮಂಗಳೂರು: ಒಂದು ಭಾಷೆ ಶೈಕ್ಷಣಿಕವಾಗಿ ಗಟ್ಟಿಯಾದಷ್ಟು ಎಲ್ಲ ಸ್ತರಗಳಲ್ಲಿ ಬಲವರ್ಧನೆಗೊಳ್ಳುತ್ತಾ ಹೋಗುತ್ತದೆ. ತುಳು ಭಾಷೆಯಾಗಿ ಬೆಳೆದಿದ್ದರೂ, ಶೈಕ್ಷಣಿಕ ಅವಕಾಶಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 2018-19ನೇ ಸಾಲಿನಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಆರಂಭಿಸಿತ್ತು. ಈ ಮೂಲಕ ತುಳು ಭಾಷೆಯ ಜನಪದ, ಸಾಹಿತ್ಯ, ಇತಿಹಾಸ, ಪರಂಪರೆಯ ಬಗ್ಗೆ ತಿಳಿಯಲು ಉನ್ನತ ಶಿಕ್ಷಣದಲ್ಲಿ ಅವಕಾಶ ಸೃಷ್ಟಿಸಲಾಗಿದೆ. ಹೈಸ್ಕೂಲ್ ಮತ್ತು ಪದವಿ ಹಂತದಲ್ಲಿ ಈಗಾಗ್ಲೇ ತುಳು ಕಲಿಕೆಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಾತ್ರವಲ್ಲದೆ, ಮುಂಬೈ, ಬೆಂಗಳೂರು ಅಲ್ಲದೆ, ದೇಶ- ವಿದೇಶದಲ್ಲಿ ತುಳು ಭಾಷಿಗರು ಹರಡಿಕೊಂಡಿದ್ದರೂ, ತುಳು ಭಾಷೆಯ ಬಗ್ಗೆ ಉನ್ನತ ಶಿಕ್ಷಣದಲ್ಲಿ ಕಲಿಯಲು ಅವಕಾಶ ಇರಲಿಲ್ಲ. ಹಲವರ ಒತ್ತಾಸೆಯಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗ ಆರಂಭಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆದಿದೆ. ತುಳು ಎಂಎ ಸ್ನಾತಕೋತ್ತರ ಪದವಿ ಪಡೆಯಲು ಇರುವ ಏಕೈಕ ಕಾಲೇಜು ಇದಾಗಿದ್ದು, ಸಾವಿರಾರು ಮಂದಿ ತುಳು ಭಾಷಿಕ ಮತ್ತು ಇತರ ಭಾಷಿಕ ಆಸಕ್ತರಿಗೆ ಸದವಕಾಶ ಸಿಕ್ಕಂತಾಗಿದೆ.
ಈ ಬಾರಿ 2021-22ರ ಸಾಲಿನ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶಾತಿ ಆರಂಭಗೊಂಡಿದ್ದು, ಆಸಕ್ತರು ನವೆಂಬರ್ 23ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ಮಂಗಳೂರು ವಿಶ್ವ ವಿದ್ಯಾಲಯದ ಪ್ರಕಟಣೆ ತಿಳಿಸಿದೆ. ಎರಡು ವರ್ಷದ ತುಳು ಎಂಎ ಪದವಿ ಕಲಿಕೆಗೆ 30 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವಿಳಾಸ www.mangaloreuniversity.ac.in ಅಥವಾ ಮೊಬೈಲ್ ಸಂಖ್ಯೆ(9972261201, 9480791560, 9448931212) ಸಂಪರ್ಕಿಸಬಹುದು. 
ಡಾ. ಮಾಧವ ಎಂ. ಕೆ .ಸಂಯೋಜಕರು, ಸ್ನಾತಕೋತ್ತರ ತುಳು ಅಧ್ಯಯನ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವ ವಿದ್ಯಾಲಯ

Related Posts

Leave a Reply

Your email address will not be published.