ಲಸಿಕೆ ವಿಚಾರದಲ್ಲಿ ಅವ್ಯವಹಾರ ನಡೆಸುವ ದೌರ್ಭಾಗ್ಯ ಬಿಜೆಪಿಗೆ ಬಂದಿಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್
ಲಸಿಕೆ ವಿಚಾರದಲ್ಲಿ ಅವ್ಯವಹಾರ ಹಾಗೂ ಭಷ್ಟ್ರಚಾರ ನಡೆಸುವ ದೌರ್ಭಾಗ್ಯ ಬಿಜೆಪಿ ಕಾರ್ಯಕರ್ತರಿಗೆ ಬಂದಿಲ್ಲ. ಕಾಂಗ್ರೆಸ್ ನಾಯಕರ ಆರೋಪಕ್ಕೆ ಏನಾದರೂ ದಾಖಲೆ ಇದ್ರೆ ಬಹಿರಂಗ ಪಡಿಸಲಿ ಎಂದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಸವಾಲು ಹಾಕಿದ್ದಾರೆ.ಕುರಿತು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ವಿತರಣೆ ವೇಳೆ ಕಾಂಗ್ರೆಸ್ ವಾರ್ಡ್ನಲ್ಲಿ ಕಾಂಗ್ರೆಸ್ ನಾಯಕರು ನಿಂತಿದ್ದಾರೆ. ಅದರ ಬಗೆ ದಾಖಲೆ ಕೂಡ ಇದೆ.ಕಾಂಗ್ರೆಸ್ಸಿಗರು ಇಡೀ ವಾರ್ಡ್ನಲ್ಲಿ ಲಸಿಕೆ ಬರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆ ಮೂಲಕ ಜನ ಸಂಖ್ಯೆ ಹೆಚ್ಚಳವಾಗುತ್ತದೆ. ಇದನ್ನೆ ಕಾಂಗ್ರೆಸ್ಸಿಗರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದನ್ನ ಅರಿತ ಬಿಜೆಪಿ ಕಾರ್ಪೋರೇಟರ್ಗಳು ಅವರ ವಾರ್ಡ್ನಲ್ಲಿ ಲಸಿಕೆ ವಿತರಣೆಯನ್ನು ಅಚ್ಚುಕಟ್ಟಾಗಿ ಮಾಡುವ ಉದ್ದೇಶದಿಂದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಯು.ಟಿ.ಖಾದರ್ ಅವರು ಲಸಿಕೆಯ ಬಗೆ ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ, ಅದರೆ ಅವರು ಮಾತ್ರ ಮನೆಯಲ್ಲಿಯೇ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ 45 ವರ್ಷದ ಕೆಳಗಿನ ತನ್ನ ಆಪ್ತ ಸಹಾಯಕನಿಗೆ ಎಲ್ಲಿ , ಯಾವ ಮಾನದಂಡದಲ್ಲಿ ಲಸಿಕೆಯನ್ನ ಕೊಡಿಸಿದ್ದಾರೆ ಎಂಬುವುದನ್ನು ಖಾದರ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಲಿ ಎಂದು ಸುದರ್ಶನ್ ಮೂಡಬಿದ್ರೆ ಆಗ್ರಹಿಸಿದರು.