ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ಗೆ ವೆಂಟಿಲೇಟರ್ ಕೊಡುಗೆ

ಸುರತ್ಕಲ್ :ಮುಕ್ಕದಲ್ಲಿರುವ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ  ಹೊಸ  ವೆಂಟಿಲೇಟರ್ ಯಂತ್ರವನ್ನು ಕರ್ನಾಟಕ  ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರು ಇವರ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.  ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ  ಎ ಶಾಮ್ ರಾವ್ ಪ್ರತಿಷ್ಠಾನಾದ ಅಧ್ಯಕ್ಷಾರಾದ ಡಾ. ಸಿಎ. ಎ. ರಾಘವೇಂದ್ರ ರಾವ್ ರವರ ಆಶೀರ್ವಾದದೊಂದಿಗೆ ಮತ್ತು ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ  ನಿರ್ದೇಶಕರಾದಂತ ಮಹಾಬಲೆಶ್ವರ ಎಂ. ಎಸ್. ಇವರ  ಉಪಸ್ಥಿಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾಲೇಜಿನ  ಡೀನ್ ಡಾ. ಉದಯ  ಕುಮಾರ್ ರಾವ್ ಸ್ವಾಗತಿಸಿದರು. ಡಾ. ಪ್ರಶಾಂತ್(ಅನಸ್ತೇಷಿಯ ವಿಭಾಗ )ರವರು ವೆಂಟಿಲೇಟರ್ ಯಂತ್ರದ  ಬಗ್ಗೆ ವಿವರಿಸಿದರು. ಈ ಸಂಧರ್ಭದಲ್ಲಿ  ಮೆಡಿಕಲ್ ಸುಪರಿಟೆಂಡೆಂಟ್ ಡಾ. ವಿನೋದ್ ಪ್ರೇಮ್ ಸಿಂಗ್ ಹಾಗೂ ಶ್ರೀನಿವಾಸ್ ಆಸ್ಪತ್ರೆ ಮತ್ತು ಕಾಲೇಜಿನ ಮುಖ್ಯಸ್ಥರು ಹಾಗೂ ವೈದ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.