ಹಾನಗಲ್ ಉಪ ಚುನಾವಣೆ : ಬಿಜೆಪಿ ಪರವಾಗಿ ಎಂ.ಅಪ್ಪಣ್ಣ ಬಿರುಸಿನ ಪ್ರಚಾರ

ಹಾನಗಲ್ ಉಪಚುನಾವಣೆ ಅಂಗವಾಗಿ ಅರಳೇಶ್ವರದಲ್ಲಿ ಮಾಜಿ ಸಚಿವರಾದ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಅರಣ್ಯವಸತಿ ಹಾಗೂ ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರು ಹಾಗೂ ಶ್ರೀ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳಾದ ಶ್ರೀ ಎಂ.ಅಪ್ಪಣ್ಣನವರು ಬಿರುಸಿನ ಪ್ರಚಾರ ನಡೆಸಿದರು.

ಈ ಹಿಂದೆ ಬಿ‌.ಎಸ್.ಯಡಿಯೂರಪ್ಪನವರು ಹಿಂದುಳಿದ ಸಮಾಜಡಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು ಅದೇ ಹಾದಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ವಿಶೇಷ ಕಾಳಜಿಯೊಂದಿಗೆ ಸಾಗುತ್ತಿದ್ದಾರೆ. ಕಾಂಗ್ರೆಸ್ಸಿಗರ ಸುಳ್ಳಿನ ಕಂತೆಗಳನ್ನು ತಿರಸ್ಕರಿಸಿ, ಕೇಂದ್ರದಲ್ಲೂ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದ್ದು ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕೆಂದು ಮಾಜಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರೊಂದಿಗೆ ಜಂಟಿ ಪ್ರಚಾರ ನಡೆಸಿದರು.

ನಮ್ಮ ಸಮಾಜವನ್ನು ತುಳಿಯಲು ಕಾಂಗ್ರೆಸ್‌ ಯಾವ ರೀತಿ ಹುನ್ನಾರ ನಡೆಸಿರುವುದು ನೀವೆಲ್ಲರೂ ಮಾಧ್ಯಮಗಳಲ್ಲಿ ನೋಡಿದ್ದೀರಿ. ಕಾಂಗ್ರೆಸ್‌ ನಮ್ಮ ಸಮಾಜವನ್ನು ತುಳಿಯುತ್ತಿದೆ. ಆದರೆ ನಮ್ಮ ಬಿಜೆಪಿ ಸರ್ಕಾರ ನಮ್ಮ ಸಮಾಜಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ ನಮ್ಮ ಸಮಾಜದ ನಾಯಕ ರಮೇಶ್‌ ಜಾರಕಿಹೊಳಿ ಅವರಿಗೆ ನೈತಿಕ ಬೆಂಬಲವೂ ದೊರೆತಂತಾಗಲಿದೆ. ಎಂದು ಜಾಗೃತಿ ಮೂಡಿಸಿದರು.

ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ನೀಡಲು ಎನ್‌ಡಿಎ ಸರ್ಕಾರವೇ ಬರಬೇಕಾಯಿತು. ಅಂಬೇಡ್ಕರ್‌ ಅವರನ್ನು ಸ್ಮರಿಸುವ ಎಲ್ಲ ಸ್ಥಳಗಳನ್ನು ತೀರ್ಥ ಕ್ಷೇತ್ರವನ್ನಾಗಿಸಿ ಅಭಿವೃದ್ಧಿ ಪಡಿಸಿ ಅವರಿಗೆ ಸದಾ ಗೌರವ ನೀಡುವ ಮೋದಿ ಹಾಗೂ ಬಿಜೆಪಿ ಸರ್ಕಾರಕ್ಕೆ ಮತ ಹಾಕುವ ಮೂಲಕ ಗೌರವಿಸೋಣ.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಭರತ್ ಮುಗದೂರ್, ಶ್ರೀ ಭೀಮನಗೌಡರು, ವಕೀಲರಾದ ಶ್ರೀ ರಮೇಶ್ ಅವರು, ಶ್ರೀ ಸುರೇಶ್ ಅವರು ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.