HomeFresh Newsಏಷ್ಯನ್ ಗೇಮ್ಸ್‌| ಮಿಶ್ರ ಕಾಂಪೌಂಡ್ ಬಿಲ್ಲುಗಾರಿಕೆ; ಶೂಟ್‌ ಆಫ್‌ ನಲ್ಲಿ ಭಾರತಕ್ಕೆ ಚಿನ್ನ

ಏಷ್ಯನ್ ಗೇಮ್ಸ್‌| ಮಿಶ್ರ ಕಾಂಪೌಂಡ್ ಬಿಲ್ಲುಗಾರಿಕೆ; ಶೂಟ್‌ ಆಫ್‌ ನಲ್ಲಿ ಭಾರತಕ್ಕೆ ಚಿನ್ನ

ಶೂಟ್‌ ಆಫ್‌ ನಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿದ ಭಾರತದ ಚಿಖಿತಾ ತನಿಪಾರ್ಥಿ–ಸಾಹಿಲ್ ಜಾಧವ್ ಜೋಡಿ, ಏಷ್ಯನ್ ಗೇಮ್ಸ್‌ನ ಮಿಶ್ರ ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು.

ಬುಧವಾರ ಒಕಾಝಾಕಿ ಚುವೊ ಸೊಗೊ ಪಾರ್ಕ್ ಮಲ್ಟಿಪರ್ಪಸ್ ಸ್ಕ್ವೇರ್‌ ನಲ್ಲಿ ನಡೆದ ಫೈನಲ್‌ ನಲ್ಲಿ ಭಾರತದ ಜೋಡಿ ದಕ್ಷಿಣ ಕೊರಿಯಾದ ಪಾರ್ಕ್ ಜಂಗ್‌ಯೂನ್–ಚೋಯ್ ಯೊಂಗ್‌ಹೀ ಜೋಡಿಯನ್ನು ಎದುರಿಸಿತು.

ಮೊದಲ ಎರಡು ಸೆಟ್‌ ಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತು. ಮೊದಲ ಸೆಟ್‌ ನಲ್ಲಿ 40-39 ಹಾಗೂ ಎರಡನೇ ಸೆಟ್‌ ನಲ್ಲಿ 40-39 ಅಂಕಗಳಿಂದ ಗೆದ್ದು 2-0 ಮುನ್ನಡೆ ಸಾಧಿಸಿತು. ಎರಡು ಸೆಟ್‌ ಗಳ ಬಳಿಕ ಭಾರತದ ಒಟ್ಟು ಅಂಕ 80-78 ಆಗಿತ್ತು.

ಬಳಿಕ ಕೊರಿಯಾ ತಿರುಗೇಟು ನೀಡಿತು. ಮೂರನೇ ಸೆಟ್‌ ನಲ್ಲಿ 39-38 ಮತ್ತು ನಾಲ್ಕನೇ ಸೆಟ್‌ನಲ್ಲಿ 40-39 ಅಂಕಗಳಿಂದ ಗೆದ್ದ ಕೊರಿಯಾ, ಒಟ್ಟು ಸ್ಕೋರ್ ಅನ್ನು 157-157ಕ್ಕೆ ತಂದಿತು. ಹೀಗಾಗಿ ಪಂದ್ಯ ಶೂಟ್‌ಆಫ್‌ ಗೆ ಸಾಗಿತು.

ಶೂಟ್‌ ಆಫ್‌ ನಲ್ಲಿ ಚಿಖಿತಾ ಮತ್ತು ಸಾಹಿಲ್ ಇಬ್ಬರೂ ಬುಲ್ಸ್‌ಐ ಗುರಿ ತಲುಪಿದರು. ಕೊರಿಯಾ ತಂಡದ ಮೊದಲ ಪ್ರಯತ್ನ 9 ಅಂಕಗಳಿಗೆ ಸೀಮಿತವಾಯಿತು. ಇದರಿಂದ ಭಾರತ ಚಿನ್ನದ ಪದಕ ಖಚಿತಪಡಿಸಿಕೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments