Home Posts tagged #mangalore

ಪ್ರಧಾನಿ ಮೋದಿಯವರ ಖಾತರಿಗಳು ಸುಳ್ಳುಗಳ ಖಾತರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ

ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ‘ಸುಳ್ಳಿನ ಪತ್ರ’ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಖಾತರಿಗಳು ‘ಸುಳ್ಳುಗಳ ಖಾತರಿಗಳಾಗಿವೆ’ ಎಂದು ಟೀಕಿಸಿದ್ದಾರೆ. ಮೋದಿ ಅವರು, ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವುದು, ಬೆಲೆ ಏರಿಕೆ ಹಾಗೂ

ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೊ: ಪೊಲೀಸ್ ಇಲಾಖೆ ಹೈ ಅಲರ್ಟ್

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದು, ಮಂಗಳೂರು ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಏರ್​ಪೋರ್ಟ್​​​ನಿಂದ ರೋಡ್ ಶೋ ಮುಕ್ತಾಯವಾಗುವ ಪ್ರದೇಶದವರೆಗೂ ಬಿಗಿ ಭದ್ರತೆ ಇರಲಿದ್ದು, ಸುಮಾರು 2500 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕುರಿತಾಗಿ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್​ ಪ್ರತಿಕ್ರಿಯಿಸಿದ್ದು, ವಿಮಾನ ನಿಲ್ದಾಣದಿಂದ ಲೇಡಿಹಿಲ್​​ವರೆಗೂ ವಿಶೇಷ ಭದ್ರತೆ ಒದಗಿಸಲಾಗಿದ್ದು, ಸುಮಾರು 2500 ಸಾವಿರ ಪೊಲೀಸ್

ಆಳ್ವಾಸ್ ಕಾಲೇಜಿನಲ್ಲಿ ತುಳು ರಂಗ್- 2024:ತುಳು ಭಾಷೆಯ ಆಸ್ತಿಯಾಗೋಣ: ಅರವಿಂದ್ ಕೆ. ಪಿ

ಮೂಡುಬಿದಿರೆ:  ನಾವು ಎಷ್ಟೇ ದೂರವಿದ್ದರೂ ಭಾಷೆ ಎಲ್ಲರನ್ನೂ, ಎಲ್ಲತನವನ್ನೂ ಒಗ್ಗೂಡಿಸುತ್ತದೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಎಲ್ಲವನ್ನೂ ಒಗ್ಗೂಡಿಸುವ ಕಾರ್ಯವನ್ನು ನಾವು ಮಾಡುವುದರ ಜೊತೆಗೆ  ತುಳು ಭಾಷೆಯ ಆಸ್ತಿಯಾಗುವ ಕೆಲಸ ಮಾಡಬೇಕಾಗಿದೆ  ಎಂದು ಅಂತರಾಷ್ಟ್ರೀಯ ಮೋಟಾರ್  ರೇಸರ್ ಮತ್ತು ಚಲನಚಿತ್ರ ನಟ ಅರವಿಂದ್ ಕೆ. ಪಿ ಹೇಳಿದರು. ಅವರು ಆಳ್ವಾಸ್ ಪದವಿ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಶನಿವಾರ ಆಯೋಜಿಸಿದ್ದ ಅಂತರ್ ಕಾಲೇಜು “ತುಳು

ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಣೆ

ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಅರ್ಥಶಾಸ್ತ್ರಜ್ಞರಾದ ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನವಾಗಿದ್ದು, ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗ್‌ದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಭವನದ ಆವರಣದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.  ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡು ದೇಶದ ಹಲವು

ಮಂಗಳೂರು: ಕಾಂಕ್ರೀಟು ಕಡಿದು ತೋಡಿದ ಗುಂಡಿ : ಅವೈಜ್ಞಾನಿಕತೆಗೆ ಬೇಕಿದೆ ಒಂದು ಕೊನೆ

ನಗರ ನಿವಾಸಿಗಳ ನಿರೀಕ್ಷೆಗಳು ಹುಸಿಯಾಗಿವೆ. ನಗರ ಸಂಪರ್ಕದ ಕಾಂಕ್ರೀಟ್ ರಸ್ತೆಗಳು ಮಾನ್ಸೂನ್‌ನಲ್ಲಿ ಬಾಳಿಕೆ ಬರುವಲ್ಲಿ ವಿಫಲವಾಗಿವೆ. ವಾಹನ ಮಾಲೀಕರಿಗೆ ಮತ್ತು ಪಾದಚಾರಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದ್ದು, ಮಂಗಳೂರು ಮಹಾನಗರಪಾಲಿಕೆ ವಿರುದ್ದ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಕಾಂಕ್ರೀಟ್ ರಸ್ತೆ ಯೋಜನೆಗಳು ಅವೈಜ್ಞಾನಿಕವಾಗಿದ್ದು ವಿವಿಧ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ನೆಪದಲ್ಲಿ ವಿವಿಧೆಡೆ ರಸ್ತೆ ಅಗೆಯುತ್ತಿರುವುದು ಮಾತ್ರ

ಮಂಗಳೂರಿಗೆ ಮೋದಿ: ತರಾತುರಿಯಲ್ಲಿ ರಸ್ತೆಗೆ ತೇಪೆ ಕಾರ್ಯ

2024 ಲೋಕಸಭಾ ಚುನಾವಣೆ ನಿಮ್ಮಿತ್ತ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೧೪ರಂದು ಮಂಗಳೂರಿಗೆ ಆಗಮಿಸಲ್ಲಿದ್ದು, ಮಂಗಳೂರು ನಗರವನ್ನು ಸ್ವಚ್ಚ ಹಾಗೂ ಸುಂದರಗೊಳಿಸುವ ಕೆಲಸಗಳು ತರಾತುರಿಯಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಏಪ್ರಿಲ್ 14ರಂದು ನಗರಕ್ಕೆ ಆಗಮಿಸಲಿದ್ದು ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ರೋಡ್ ಶೋ

ಗೋಳಿತ್ತೊಟ್ಟು: ಕಾಡಾನೆ ದಾಳಿ-ಕೃಷಿ ನಾಶ

ನೆಲ್ಯಾಡಿ: ಗೋಳಿತ್ತೊಟ್ಟು ಪರಿಸರದಲ್ಲಿ ಕಳೆದ 1 ವಾರದಿಂದ ಕಾಡಾನೆಯೊಂದು ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಕೃಷಿ ನಾಶಗೊಳಿಸಿರುವುದಾಗಿ ವರದಿಯಾಗಿದೆ. ಗೋಳಿತ್ತೊಟ್ಟು ಗ್ರಾಮದ ಚೆನ್ನಪ್ಪ ಗೌಡ ಕುದ್ಕೋಳಿ, ಚಿದಾನಂದ ಗೌಡ ಅನಿಲ, ಪಿಲಿಫ್ ಬಳಕ ಹಾಗೂ ಪರಿಸರದ ನಿವಾಸಿಗಳ ತೋಟಗಳಿಗೆ ಕಾಡಾನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಕೃಷಿ ನಾಶಗೊಳಿಸಿದೆ. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಎ.11ರಂದು ಪರಿಸರಕ್ಕೆ ಭೇಟಿ ನೀಡಿದ್ದು ಅರಣ್ಯದಂಚಿನಲ್ಲಿ

ವಿಟ್ಲ :ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು

ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಬಾಯಿಲ ವೀರಕಂಭ ನಿವಾಸಿ ವಿಶ್ವನಾಥ್ ಎಂಬವರು ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದುಬಂದಿದೆ. ಮೇಲ್ನೋಟಕ್ಕೆ ಆತ್ಮ ಹತ್ಯೆ ಎಂದು ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಗೋಪಾಲ ಪೂಜಾರಿ ಸಜ್ಜನ ಮತ್ತು ಪ್ರಾಮಾಣಿಕ ಎಂದಿದ್ದೆ, ಸುಳ್ಳಾದರೆ ಕ್ಷಮಿಸಿ : ಕೋಟ ತಿರುಗೇಟು

ಮಾಜಿ ಶಾಸಕ ಗೋಪಾಲ ಪೂಜಾರಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು ನನ್ನ ಬಗ್ಗೆಯೂ ಕೋಟ ಸುಳ್ಳು ಹೇಳಿದ್ದಾರೆ ಎಂದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೋಪಾಲ ಪೂಜಾರಿಯವರನ್ನು ಸಜ್ಜನ ಮತ್ತು ಪ್ರಾಮಾಣಿಕ ಎಂದು ನಾನು ಹೇಳಿದ್ದೆ. ಈ ಮಾತು ಸುಳ್ಳಾದರೆ ಕ್ಷಮಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೋಪಾಲ ಪೂಜಾರಿ ಅವರ ಮಾತಿಗೆ ತಿರುಗೇಟು

ಮೂಡುಬಿದಿರೆ: ವಾಲ್ಪಾಡಿಯಲ್ಲಿ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ

ಮೂಡುಬಿದಿರೆ: ಭಾರತ ಚುನಾವಣಾ ಆಯೋಗ,‌ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಹಾಗೂ ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಿಯೂರು ಸುಮಂಗಲಿ ಕ್ಯಾಶ್ಯು ಇಂಡಸ್ಟ್ರೀಸ್ ನಲ್ಲಿ ದುಡಿಯುತ್ತಿರುವ ಕೂಲಿಕಾರ್ಮಿಕರಿಗೆ ಗುರುವಾರ ಸಂಜೆ ಮತದಾನ ಜಾಗೃತಿ ಮೂಡಿಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.‌ವೆಂಕಟಾಚಲಪತಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಮತದಾನ‌ದ ಮಹತ್ವವನ್ನು ತಿಳಿಸಿ