ಸುಬ್ರಹ್ಮಣ್ಯ ಸೆಪ್ಟಂಬರ್ 22 : ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 600 ಕೋಟಿ ವೆಚ್ಚದ ಮಾಸ್ಟರ್ ಪ್ಲಾನ್ ಅಭಿವೃದ್ಧಿ ಕಾಮಗಾರಿಗಳು ನಿಧಾನಗೊಂಡಿರುವ ಬಗ್ಗೆ ಕರ್ನಾಟಕ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಮುಜರಾಯಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡದಲ್ಲದೆ ಸಮರ್ಪಕ ಉತ್ತರ ನೀಡಲು ವಿಫಲರಾದ ಅಧಿಕಾರಿಗಳನ್ನು ಖಡಕ್ ಮಾತಿನೊಂದಿಗೆ ಬೆವರಳಿಸಿದ ಪ್ರಸಂಗ ರವಿವಾರ ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಸಭಾಂಗಣದಲ್ಲಿ ನಡೆದ ಮಹತ್ವದ ಸಭೆಯಲ್ಲಿ ನಡೆಯಿತು.
600 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿರುವ ಭೂಸ್ವಾಧೀನ ಪ್ರಕ್ರಿಯೆ, ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವ ಫೈಲ್, ಇತ್ಯಾದಿಗಳಿಗೆ ವೇಗ ನೀಡಿ ಕೂಡಲೇ ಕಾಮಗಾರಿ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು. ನೋಟಿಸ್ ನೀಡಿದ ವಾಣಿಜ್ಯ ಕಟ್ಟಡಗಳನ್ನು ಈ ಕೂಡಲೇ ಡಿಮಾ ಲಿಶ್ ಮಾಡಿ ಎಂದು ಖಡಕ್ಕಾಗಿ ಅಧಿಕಾರಿಗಳಿಗೆ ಆದೇಶಿಸಿದರು. ಹಾಗೆಯೇ ತಿರುಪತಿ ಮಾದರಿಯಲ್ಲಿ ಭಕ್ತರಿಗೆ ಸರತಿಯ ಸಾಲಿನ ವ್ಯವಸ್ಥೆ, ಶ್ರೀ ದೇವರ ದರ್ಶನದ ವ್ಯವಸ್ಥೆ,ಪ್ರಸಾದ ಸ್ವೀಕಾರ ವ್ಯವಸ್ಥೆ, ಹಾಗೂ ಬೋಜನ ಪ್ರಸಾದ ವ್ಯವಸ್ಥೆ,ಅಲ್ಲದೆ ವಸತಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಕಾರ್ಯದರ್ಶಿಗಳು “ನಾನು ಈಗಾಗಲೇ ಎಲ್ಲ ವಿಚಾರಗಳನ್ನ ಕೇಳಿ ತಿಳಿದುಕೊಂಡು ಸಭೆಯಲ್ಲಿ ಚರ್ಚೆ ಮಾಡಿ ತಿಳಿಸಿರುತ್ತೇನೆ. ಎಲ್ಲಾ ಇಲಾಖೆಗಳಿಗೆ ಸೂಚನೆ ಕೂಡ ನೀಡಿರುತ್ತೇನೆ. ಮುಜರಾಯಿ,, ಕಂದಾಯ ಇಲಾಖೆಯವರು, ವ್ಯವಸ್ಥಾಪನ ಸಮಿತಿ ಹಾಗೂ ಮಾಸ್ಟರ್ ಪ್ಲಾನ್ ಸಮಿತಿಯವರೊಂದಿಗೆ ಜಂಟಿಯಾಗಿ ಎಲ್ಲಾ ಕಾಮಗಾರಿಗಳನ್ನು ಈ ಕೂಡಲೇ ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ. ಕಾಮಗಾರಿಗಳು ಶೀಘ್ರ ಆಗುವಂತೆ ವೇಗ ನೀಡಿದ್ದೇನೆ ಅಲ್ಲದೆ ನಾನೇನು ಇಲ್ಲಿ ಹೇಳಿದ್ದೇನೊ ಅದೆಲ್ಲವನ್ನು ಮುಂದಿನ ದಿನಗಳಲ್ಲಿ ಕಾರ್ಯಗತ ಮಾಡಿಸುತ್ತೇನೆ. ಒಟ್ಟಾಗಿ ಕುಕ್ಕೆ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಮೂಲಸೌಕರ್ಯ ಕೊರತೆ ಆಗದ ಹಾಗೆ ನಿಗಾವಹಿಸುತ್ತೇನೆ “ಎಂದರು.
ಸಭೆಯಲ್ಲಿ ಶ್ರೀದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು,ಸದಸ್ಯರುಗಳು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳು, ಶ್ರೀ ದೇವಳದ ಕಾರ್ಯ ನಿರ್ವಹಣಾಧಿಕಾರಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಇಂಜಿನಿಯರ್,,ಒಳಚರಂಡಿ ಹಾಗೂ ನೈರ್ಮಲ್ಯ ಇಲಾಖೆ ಇಂಜಿನಿಯರ್ ಗಳು, ಸುಬ್ರಹ್ಮಣ್ಯ ವಿಶೇಷ ಉಪ ವಿಭಾಗದ ಇಂಜಿನಿಯರುಗಳು, ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೇ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕುಕ್ಕೆ ಸುಬ್ರಹ್ಮಣ್ಯ: 600 ಕೋಟಿ ಮಾಸ್ಟರ್ ಪ್ಲಾನ್. ಅಧಿಕಾರಿಗಳ ಬೆವರಿಳಿಸಿದ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ
RELATED ARTICLES

