HomeFresh Newsಗಾಳಿ ಮಳೆಯಿಂದಾಗಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್‌ಗೆ ಹಾನಿ

ಗಾಳಿ ಮಳೆಯಿಂದಾಗಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್‌ಗೆ ಹಾನಿ

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಅರಬ್ಬಿ‌ ಸಮುದ್ರದಲ್ಲಿ ‌ಬಾರಿ ಗಾಳಿ ಮಳೆಯಾಗಿದ್ದು, ಕುಂದಾಪುರದಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಈ ಗಾಳಿ ಮಳೆಗೆ ಸಿಲುಕಿ‌‌ ಹಾನಿಗೊಳಗಾದ ಘಟನೆ ‌ನಡೆದಿದೆ.

ಕುಂದಾಪುರ ತಾಲೂಕಿನ ಕಂಚಗೋಡಿನ ಹೊಸಪೇಟೆ ನಿವಾಸಿಯಾದ ನಾಗ ಖಾರ್ವಿಯವರಿಗೆ ಸೇರಿದ ಯಕ್ಷೇಶ್ವರಿ ಅನುಗ್ರಹ ದೋಣಿಯು ಗಾಳಿ ಮಳೆಗೆ ಸಿಲುಕಿ‌‌  ದೋಣಿ ಮುಳುಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂಜಿನ್ ನೀರಿನಲ್ಲಿ ಮುಳುಗಿ ಅಂದಾಜು 1ಲಕ್ಷ ರೂಪಾಯಿ ನಷ್ಟವಾಗಿದೆ.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments