HomeFresh Newsದ.ಕ. ಜಿಲ್ಲೆಯಲ್ಲಿ ಜುಲೈ 2ರಿಂದ ಮತ್ತಷ್ಟು ಅನ್‍ಲಾಕ್: ಸಂಜೆ 5ರ ವರೆಗೆ ಖರೀದಿ, ಸಂಚಾರಕ್ಕೆ ಅವಕಾಶ:...

ದ.ಕ. ಜಿಲ್ಲೆಯಲ್ಲಿ ಜುಲೈ 2ರಿಂದ ಮತ್ತಷ್ಟು ಅನ್‍ಲಾಕ್: ಸಂಜೆ 5ರ ವರೆಗೆ ಖರೀದಿ, ಸಂಚಾರಕ್ಕೆ ಅವಕಾಶ: ಜಿಲ್ಲಾಧಿಕಾರಿ

ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಸಡಿಲಿಕೆಯನ್ನು ಜು.2ರಿಂದ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಮತ್ತು ಸಂಚಾರಕ್ಕೆ ಅನುಮತಿ ನೀಡಿ ರಾಜ್ಯ ಸರಕಾರ ಆದೇಶಿಸಿದೆ. ಸರಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸುವುದಾಗಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 2ರಿಂದ ಮತ್ತಷ್ಟು ಅನ್‍ಲಾಕ್ ಜಾರಿಯಾಗಲಿದ್ದು, ಬೆಳಗ್ಗೆ 5ರಿಂದ ರಾತ್ರಿ 7ರ ವರೆಗೆ ಜನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರಾತ್ರಿ 7ರಿಂದ ಬೆಳಗ್ಗೆ 5ರ ವರೆಗೆ ನೈಟ್ ಕಫ್ರ್ಯೂ ಜಾರಿಯಲ್ಲಿರಲಿದೆ. ಬೆಳಗ್ಗೆ 6ರಿಂದ ಸಂಜೆ 5 ರ ವರೆಗೆ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಮಾಲ್, ಅಂಗಡಿಗಳಲ್ಲಿ ಎಸಿ ಬಳಕೆಗೆ ಅವಕಾಶವಿಲ್ಲ. ಶನಿವಾರ ಮತ್ತು ಭಾನುವಾರ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿರಲಿದೆ. ಶೇ. 50ರಷ್ಟು ಪ್ರಯಾಣಿಕರ ಬಸ್ ಸಂಚಾರಕ್ಕೆ ಅವಕಾಶವಿದೆ. ಜುಲೈ 5ರ ವರೆಗೆ ಈ ಮಾರ್ಗಸೂಚಿ ಜಾರಿಯಲ್ಲಿರುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ. ಆದೇಶಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments