HomeFresh Newsಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಅಭಿಯಾನ:ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಅಭಿಯಾನ:ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಬಂಗ್ರಕೂಳೂರು ವಾರ್ಡ್ 16 ರಲ್ಲಿ ರಿಕ್ಷಾ,ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೀಡುವ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಅಭಿಯಾನಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಚಾಲನೆ.

ಕೋವಿಡ್ 2ನೇ ಅಲೆಯ ಲಾಕ್ ಡೌನ್ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರವು ರಿಕ್ಷಾ,ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೀಡುವ ರೂಪಾಯಿ 3000/-ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಸೇವಾಕಾರ್ಯಕ್ಕೆ ಬಂಗ್ರಕೂಳೂರು ವಾರ್ಡಿನ ಮನಪಾ ಸದಸ್ಯರಾದ ಕಿರಣ್ ಕುಮಾರ್ ರವರ ಕೋಡಿಕಲ್ ನಲ್ಲಿರುವ ಜನಸೇವಾ ಕಛೇರಿಯಲ್ಲಿ ಇಂದು ಮಂಗಳೂರು ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಯವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ತಿಲಕ್ ರಾಜ್ ಕೃಷ್ಣಾಪುರ,ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾದ ಶ್ರೀ ಧೀರೇಶ್ ಕೊಲ್ಯ,ಶಕ್ತಿಕೇಂದ್ರ ಪ್ರಮುಖರಾದ ಶ್ರೀ ಉಮೇಶ್ ಮಲರಾಯಸಾನ,ಶ್ರೀ ಹರಿಪ್ರಸಾದ್ ಶೆಟ್ಟಿ, ಬೂತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments