HomeFresh Newsಸ್ಕ್ರೂ ಬಳಸಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿದ ಚಾರ್ಲ್ಸ್ ಕೆ.ಸಿ.

ಸ್ಕ್ರೂ ಬಳಸಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿದ ಚಾರ್ಲ್ಸ್ ಕೆ.ಸಿ.

ಮಂಗಳೂರಿನ ಸೃಜನಶೀಲ ಕಲಾವಿದ ಚಾರ್ಲ್ಸ್ ಕೆ.ಸಿ ಅವರು ಸ್ಕ್ರೂಗಳನ್ನು ಬಳಸಿ ಸ್ವಾಮಿ ವಿವೇಕಾನಂದರ ಕಲಾಕೃತಿಯನ್ನು ಬಿಡಿಸಿ ವಿಶ್ವ ದಾಖಲೆ ಸೃಷ್ಠಿಸಿದ್ದಾರೆ. ಅವರು 2,768 ಸ್ಕ್ರೂಗಳನ್ನು ಬಳಸಿ ಸ್ವಾಮಿ ವಿವೇಕಾನಂದ ಕಲಾಕೃತಿಯನ್ನು ರಚಿಸಿ ದಾಖಲೆ ನಿರ್ಮಿಸಿದ್ದಾರೆ.

ಡಾ. ಸೋನಿಯಾ ನೊರೊಹ್ನಾ ಹಾಗೂ ಕಾಲೇಜಿನ ಡೀನ್ ಪ್ರೊ. ಕೀರ್ತನ್ ರಾಜ್ ಅವರ ಮಾರ್ಗದರ್ಶನದಲ್ಲಿ ಚಾರ್ಲ್ಸ್ ಅವರು ಈ ಒಂದು ಕಲಾಕೃತಿಯನ್ನು ರಚಿಸಿದ್ದಾರೆ. ಚಾರ್ಲ್ಸ್ ಅವರ ಈ ಕಲಾಕೃತಿಗೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ. ಇನ್ನು ಚಾರ್ಲ್ಸ್ ಕೆ.ಸಿ ಅವರು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್‌ನ ತೃತೀಯ ಬಿಬಿಎ ಪೋರ್ಟ್ ಮ್ಯಾನೇಜ್ಮೆಂಟ್ ವಿಭಾಗದ ವಿದ್ಯಾರ್ಥಿಯಾಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments