HomeFresh Newsಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್ 2026:ಅಂತರ್ ರಾಜ್ಯ ಪ್ರಶಸ್ತಿಗೆ ಕ್ರೀಡಾ ಅಂಕಣಕಾರ ಎಸ್. ಜಗದೀಶ್ವಂದ್ರ ಅಂಚನ್...

ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್ 2026:ಅಂತರ್ ರಾಜ್ಯ ಪ್ರಶಸ್ತಿಗೆ ಕ್ರೀಡಾ ಅಂಕಣಕಾರ ಎಸ್. ಜಗದೀಶ್ವಂದ್ರ ಅಂಚನ್ ಸೂಟರ್ ಪೇಟೆ ಆಯ್ಕೆ

ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡುವ ಪ್ರತಿಷ್ಠಿತ ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್ 2026 ಅಂತರ್ ರಾಜ್ಯ ಪ್ರಶಸ್ತಿಗೆ ಕ್ರೀಡಾ ಅಂಕಣಕಾರ ಎಸ್. ಜಗದೀಶ್ವಂದ್ರ ಅಂಚನ್ ಸೂಟರ್ ಪೇಟೆ ಆಯ್ಕೆಗೊಂಡಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ ಬರವಣಿಗೆ ಹಾಗೂ ಕ್ರೀಡಾ ಅಂಕಣಕಾರರಾಗಿ ಗುರುತಿಸಿಕೊಂಡಿರುವ ಎಸ್. ಜಗದೀಶ್ಚಂದ್ರ ಅಂಚನ್ ಇದುವರೆಗೆ ಸುಮಾರು ೪೫೦೦ಕ್ಕೂ ಹೆಚ್ಚು ಕ್ರೀಡಾ ಲೇಖನ, ಅಂಕಣ ಬರಹಗಳನ್ನು ಬರೆದಿದ್ದು, ಇದು ಜಿಲ್ಲೆ, ರಾಜ್ಯ ಅಂತರ್ ರಾಜ್ಯ ಮಟ್ಟದ ವಿವಿಧ ದಿನ ಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಮುಖ್ಯವಾಗಿ ಕೇರಳದ ಕೊಟ್ಟಾಯಂನಿಂದ ಪ್ರಕಟಗೊಳ್ಳುತ್ತಿದ್ದ ಮಂಗಳ ವಾರಪತ್ರಿಕೆಯಲ್ಲಿ ಇವರು ಸುಮಾರು15 ವರ್ಷ ಕ್ರೀಡಾ ಅಂಕಣಗಳನ್ನು ಬರೆದು ಜನಪ್ರಿಯತೆ ಗಳಿಸಿರುತ್ತಾರೆ.
ಮಾಧ್ಯಮ ಕ್ಷೇತ್ರದಲ್ಲಿ ಕ್ರೀಡಾ ವಿಮರ್ಶಾತ್ಮಕ ಲೇಖನಗಳ ಮೂಲಕ ಗುರುತಿಸಿಕೊಂಡು ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಇವರಿಗೆ ೨೦೨೬ ಜನವರಿ ೧೮ರಂದು ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ನಡೆಯುವ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments