ಯುಎಸ್‌ಎಯ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಜೊತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ನೌಕಾ ಕಾರ್ಯದರ್ಶಿ ಜಾನ್ ಪೆಲಾನ್‌ರನ್ನು ಪೆಂಟಗಾನ್ ಕಿತ್ತು ಹಾಕಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ ಒಟ್ಟು ಮಿಲಿಟರಿಯ ಮುಖ್ಯ ನೆಲೆ ಪೆಂಟಗಾನ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸೂಚನೆಯಂತೆ ನೌಕಾ ಕಾರ್ಯದರ್ಶಿ ಜಾನ್ ಪೆಲಾನ್‌ರನ್ನು ವಜಾ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಆಮೇಲೆ ಹೊರಗಿಡಲಾಗುವುದು ಎಂದು ಪೆಂಟಗಾನ್ ವಕ್ತಾರ ಸೀನ್ ಪ್ಯಾರ್ನೆಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಯುಎಸ್‌ಎ ಅಧ್ಯಕ್ಷ ಟ್ರಂಪ್ ಅವರ ಅಭ್ಯರ್ಥಿಯಾಗಿ ನಾಗರಿಕ ನೇಮಕವಾಗಿ ಜಾನ್ ಪೆಲಾನ್ ಪೆಂಟಗಾನ್ ಸೇರಿದ್ದಾರೆ. ರಕ್ಷಣಾ ಕಾರ್ಯದರ್ಶಿ ಬಯಸದ ಹದಿನೇಳು ಬಿಲಿಯನ್ ವೆಚ್ಚದ ನೌಕಾ ದಳ ಸಲಕರಣೆಗಳನ್ನು, ಮುಖ್ಯವಾಗಿ ಗುಂಪು ದಾಳಿಯ ಡ್ರೋನ್‌ಗಳನ್ನು ಪೆಲಾನ್ ಖರೀದಿಸಿದ್ದಾರೆ.

ಇರಾನ್ ಯುದ್ಧಕ್ಕೆ ಚಿನ್ನದ ಹಡಗು ಎಂದು ಹೇಳಿದ್ದಾರೆ. ಈ ಸಂಬಂಧ ತಕರಾರು ತೆಗೆದ ಹೆಗ್ಸೆತ್ ಅವರು ವಜಾಕ್ಕೆ ಸೂಚಿಸಿದ್ದಾರೆ. ಇರಾನ್ ಯುದ್ಧದ ಜೊತೆಗೆ ಟ್ರಂಪ್ ತನ್ನ ದೇಶದಲ್ಲೇ ಹಲವು ಅಡಚಣೆಗಳನ್ನು ಎದುರಿಸುತ್ತಿದ್ದಾರೆ. ಒಂದು ರಕ್ಷಣಾ ರಾಜಕೀಯ ತಲೆ ಉರುಳಿದೆ. ಇರಾನ್ ಯುದ್ಧಕ್ಕೆ ನೂರು ಪಟ್ಟು ಹೆಚ್ಚು ಶಕ್ತಿಶಾಲಿ ಟ್ರಂಪ್ ಕ್ಲಾಸ್ ಯುದ್ಧ ಹಡಗು ಎಂದೂ ಕರೆಯಲಾಗಿತ್ತು.

ಡ್ರೋನ್ ಹೊತ್ತ ಮಾರ್ ಎ ಲಾಗೊ ಹಡಗನ್ನು 2025ರಲ್ಲಿ ಫ್ಲೋರಿಡಾದಲ್ಲಿ ನಿರ್ಮಿಸಲಾಗಿತ್ತು. ಪೆಲಾನ್ ತಳ್ಳಿದ್ದಕ್ಕೆ ಟ್ರಂಪ್ ನಿವಾಸ ವೈಟ್ ಹೌಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

