ಕಾಸಾಬನಾನಾ ಎಂಬ ಸೌತೆಕಾಯಿ ಕುಟುಂಬದ ಹಣ್ಣು ಅದ್ಭುತ ಪರಿಮಳ ಬೀರುವುದರಿಂದ ನ್ಯಾಚುರಲ್ ಫ್ರೆಶ್ನರ್ ಆಗಿ ಮನೆಗಳಲ್ಲಿ ಇಡುವ ಪರಿಪಾಠವಿದೆ.

ಈ ದೊಡ್ಡ ಹಣ್ಣು ನಡು ತೆಂಕಣ ಅಮೆರಿಕ ಖಂಡ ಮೂಲದ್ದು. ಬಳ್ಳಿಯಲ್ಲಿ ಆಗುವ ದೊಡ್ಡ ಕಾಯಿ ಹಣ್ಣು.

ಇದರ ಕಾಯಿಯನ್ನು ಕಾಯಿಪಲ್ಯ ಮಾಡಲು ಬಳಸುತ್ತಾರೆ. ಹಣ್ಣನ್ನು ನೇರ ತಿನ್ನುವುದಲ್ಲದೆ ಅಡುಗೆ, ಜಾಮ್, ಜೆಲ್ಲಿ ಮಾಡುವರಲ್ಲದೆ ಕಾಪಿಡುತ್ತಾರೆ.

ಗಟ್ಟಿಯಾದ ಇದರ ಹೊರಭಾಗವು ಕೆಂಪು, ಕೆನ್ನೇರಳೆ, ಕಿತ್ತಳೆ ಬಣ್ಣದಲ್ಲಿ ಇರುತ್ತದೆ.

ಒಳಭಾಗವು ಸಿಹಿಗುಂಬಳ ಕಾಯಿಯಂತೆ ನಸು ಹಳದಿ ಇದ್ದು, ಬೀಜದ ಭಾಗವನ್ನು ತೆಗೆದು ಬಿಸಾಡಲು ಆಗುತ್ತದೆ.

ಅಲಂಕಾರಿಕ ಸಸ್ಯವಾಗಿ ಹಾಗೂ ನೆರಳು ಬಳ್ಳಿ ಹಬ್ಬು ಆಗಿಯೂ ಇದನ್ನು ಬೆಳೆಸುತ್ತಾರೆ. ಇದನ್ನು ಫ್ರಾಗ್ರೆಂಟ್ ಮೆಲೋನ್ ಎಂದಿತ್ಯಾದಿಯಾಗಿಯೂ ಕರೆಯುತ್ತಾರೆ.

