HomeUncategorizedಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ | ಬಹುತೇಕ ಕಡೆ ಬಿಜೆಪಿಗೆ ಮತ್ತೆ ಬಹುಮತ | ಮಹಾನಗರಪಾಲಿಕೆಗಳಾಚೆ...

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ | ಬಹುತೇಕ ಕಡೆ ಬಿಜೆಪಿಗೆ ಮತ್ತೆ ಬಹುಮತ | ಮಹಾನಗರಪಾಲಿಕೆಗಳಾಚೆ ಕಾಂಗ್ರೆಸ್ ಸದ್ದು

ಗುಜರಾತಿನ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಹುತೇಕ ಕಡೆ ಬಿಜೆಪಿಯು ಮತ್ತೆ ಅಧಿಕಾರ ಗಿಟ್ಟಿಸಿಕೊಂಡಿದೆ; ಮಹಾನಗರಪಾಲಿಕೆಗಳು ಬಿಜೆಪಿ ವಶವಾಗಿವೆ.


ಗುಜರಾತಿನ 15 ಮಹಾನಗರಪಾಲಿಕೆ, 84 ಮುನಿಸಿಪಾಲಿಟಿಗಳು, 34 ಜಿಲ್ಲಾ ಪಂಚಾಯತ್‌ಗಳು ಹಾಗೂ 260 ತಾಲೂಕು ಪಂಚಾಯತುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಬಹುತೇಕ ಕಡೆ ಗೆದ್ದಿದೆ.

ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಬಿಜೆಪಿಯು ಗಟ್ಟಿ ಅಧಿಕಾರ ಗಿಟ್ಟಿಸಿದೆ. ಮುಖ್ಯವಾಗಿ ಹದಿನೈದು ಮಹಾನಗರಪಾಲಿಕೆಗಳಲ್ಲೂ ಬಿಜೆಪಿ ಬಹುಮತ ಗಳಿಸಿದೆ.

ಎಲ್ಲ ಮಹಾನಗರಪಾಲಿಕೆಗಳಲ್ಲಿ ಬಿಜೆಪಿ ಬಹುಮತ ಪಡೆದಿರುವುದು ಇದೇ ಮೊದಲು. ಕಾಂಗ್ರೆಸ್ ಅಭ್ಯರ್ಥಿಗಳು ಅಲ್ಲೊಬ್ಬರು ಇಲ್ಲೊಬ್ಬರು ಗೆದ್ದಿದ್ದಾರೆ.

2021ರ ಚುನಾವಣೆಯಲ್ಲಿ ಸೂರತ್ ಮನಪಾದಲ್ಲಿ ಕಾಂಗ್ರೆಸ್ ಪೂರ್ಣ ಸೋತಿತ್ತು. ಈ ಬಾರಿ ಅರ್ಶದ್ ಜರಿವಾಲ ದೊಡ್ಡ ಗೆಲುವು ಕಂಡಿದ್ದಾರೆ.


ಮುನಿಸಿಪಾಲಿಟಿಗಳಲ್ಲಿ ಮತ್ತು ನಗರಗಳಾಚೆ ಬಿಜೆಪಿಗೆ ಪೂರ್ಣ ಯಶಸ್ಸು ಸಿಕ್ಕಿಲ್ಲ. ಬಿಜೆಪಿಯ ಗಟ್ಟಿ ನೆಲೆ ಎನ್ನಲಾದ ದಾಬೋಯಿ ಮುನಿಸಿಪಾಲಿಟಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದಿದೆ.

ಬೋರ್ಸದ್ ಮುನಿಸಿಪಾಲಿಟಿಯಲ್ಲಿ ಪಕ್ಷೇತರರು 17, ಎಎಪಿ, ಎಐಎಂಐಎಂ ತಲಾ ಒಂದು ಎಂದು ಗೆದ್ದು, ಬಿಜೆಪಿ 17 ಎಂದು ಹಿಂದೆ ಬಿದ್ದಿದೆ. ಅಹಮದಾಬಾದ್ ಮನಪಾದಲ್ಲಿ ಅಧಿಕಾರ ಹಿಡಿಯದಿದ್ದರೂ ಕಾಂಗ್ರೆಸ್ ಗಣನೀಯ ಗೆಲುವು ಕಂಡಿದೆ.

ಸೂರತ್‌ನಲ್ಲಿ ಒಂದು ಕಡೆ ಮೊದಲು ಕಾಂಗ್ರೆಸ್ ಎಂದು ಆಮೇಲೆ ಬಿಜೆಪಿ ಗೆಲುವು ಎಂದಾಗ ಬೀದಿಯಲ್ಲಿ ಎರಡೂ ಪಕ್ಷಗಳವರು ಗುದ್ದಾಡಿಕೊಂಡರು.


ಭಾನುವಾರ ನಡೆದ ಚುನಾವಣೆಯಲ್ಲಿ ಮನಪಾಗಳಲ್ಲಿ 55 ಶೇಕಡಾ ಹಾಗೂ ಉಳಿದ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ 66 ಶೇಕಡಾ ಮಾತ್ರ ಮತದಾನವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments