ಉಷ್ಣವಲಯದ ಮಳೆ ಕಾಡಿನ ಭಾರೀ ಮರದ ಫಲ ತೆರಾಪ್ ಹಲಸು, ಹೆಬ್ಬಲಿಸಿನಂತೆ ಕಂಡರೂ ಇದು ಅದಲ್ಲ.
ತೆರಾಪ್ ತರಾಪ್, ಮರಂಗ್ ಇವು ಹಲಸು, ಹೆಬ್ಬಲಸು, ದಿವಿ ಹಲಸು ಬಗೆಯಾದರೂ ಪೂರ್ಣ ವ್ಯತ್ಯಾಸದ್ದು. ಕಾಯಿ ಹಸಿರಾಗಿದ್ದು ಹಣ್ಣಾದಾಗ ಹೊರಮೈ ಕಂದು ಬಣ್ಣದ್ದಾಗುತ್ತದೆ. ದ್ರಾಕ್ಷಿ ಗಾತ್ರದ ಒಳ ತೊಳೆಯು ಅಚ್ಚ ಬಿಳಿ ಬಣ್ಣದಲ್ಲಿ ಇರುತ್ತದೆ.

ಇದರ ಹೊರ ಸಿಪ್ಪೆ ರಚ್ಚವು ಕಟು ರಾಸಾಯನಿಕ ವಾಸನೆ ಹೊಂದಿದೆ. ಆದರೆ ತೊಳೆಯು ಕ್ರೀಮೀ ರುಚಿಕರ. ಸಿಪ್ಪೆಯನ್ನು ಬೇಗ ಬೇರೆ ಮಾಡಿ ತೊಳೆಯನ್ನು ತಡ ಮಾಡದೆ ತಿನ್ನಬೇಕು. ಇಟ್ಟರೆ ಕೂಡಲೆ ಹುದುಗು ಹಳಿ ಬರಲು ತೊಡಗುತ್ತದೆ. ಇದರ ಬೀಜವನ್ನು ಸಹ ಹುರಿದು ಬೇಯಿಸಿ ತಿನ್ನಬಹುದು.
ಬೋರ್ನಿಯೋ ಮೂಲದ ಇದು ಬ್ರೂನೇ, ಇಂಡೋನೇಶಿಯಾ, ಮಲೇಶಿಯಾ, ಫಿಲಿಪ್ಪೀನ್ಸ್, ತಾಯ್ಲ್ಯಾಂಡ್ಗಳ ಮಳೆ ಕಾಡುಗಳಲ್ಲಿ ಕಾಣಬರುತ್ತದೆ. ಗಟ್ಟಿ ಮರವಾದ್ದರಿಂದ ಜೋಯೀ ಓಕ್, ತೆರಾಪ್, ತರಾಪ್, ಮರಂಗ್ ಇತ್ಯಾದಿ ಹೆಸರುಗಳು ಇದಕ್ಕೆ ಇವೆ. ಸಿಪ್ಪೆ ಮತ್ತು ಒಳ ಗುಂಜಿಯನ್ನು ಕೆಲವು ರಾಸಾಯನಿಕ ಕ್ರಿಯೆಗಳಲ್ಲಿ ಬಳಸುವರು.
