ಪ್ರಪಂಚದ ತೋಡಿರುವ ಪೆಟ್ರೋಲಿಯಂನಲ್ಲಿ 70 ಶೇಕಡಾ ಮಂಗಳೂರು ಸಹಿತ ನೆಲದಡಿಯಲ್ಲಿ ಕಾಪಿಡಲ್ಪಟ್ಟಿದೆ.
ಯುದ್ಧ, ಆರ್ಥಿಕ ನಿರ್ಬಂಧ, ಪ್ರಾಕೃತಿಕ ವಿಪತ್ತುಗಳು ಮತ್ತು ಪೆಟ್ರೋಲಿಯಂ ಏರಿಳಿತ ಸಂದರ್ಭಗಳಲ್ಲಿ ಮಾತ್ರ ಇಂತಾ ಕಾಪಿಡು ಪೆಟ್ರೋಲಿಯಂ ಬಳಸುತ್ತಾರೆ. ಮಂಗಳೂರು ತಾಲೂಕಿನ ಪೆರ್ಮುದೆ, ನಗರದ ಹೊರ ಭಾಗದ ನೆಲದಡಿಯಲ್ಲಿ ಕೂಡ ಇಂತಾ ಕಾಪಿಡು ಪೆಟ್ರೋಲಿಯಂ ಇದೆ.

ಯುದ್ಧದ ದುಷ್ಪರಿಣಾಮ ಕಾರಣಕ್ಕೆ ಕಳೆದೆರಡು ತಿಂಗಳುಗಳಲ್ಲಿ ಇಂತಾ ಕಾಪಿಡು ಪೆಟ್ರೋಲಿಯಮ್ಮನ್ನು ಅಲ್ಪ ಸ್ವಲ್ಪ ಬಳಸಿರಬಹುದು. ಅದಕ್ಕೆ ಹಿಂದಿನ ಲೆಕ್ಕವಿದು. ಕಳೆದ ಮೂರು ದಶಕಗಳಿಂದಷ್ಟೆ ಈ ಸ್ಟೋರೇಜ್ ಆರಂಭವಾಗಿದೆ. ಚೀನಾ, ಯುಎಸ್ಎ, ಜಪಾನ್ ಮೊದಲ ಮೂರು ಸ್ಥಾನಗಳಲ್ಲಿ ಇವೆ.

ಚೀನಾ 13.97 ಲಕ್ಷ ಬ್ಯಾರೆಲ್, ಯುಎಸ್ಎ 41.13 ಲಕ್ಷ ಬ್ಯಾರೆಲ್, ಜಪಾನ್ 26.3 ಲಕ್ಷ ಬ್ಯಾರೆಲ್, ಯೂರೋಪು ಒಕ್ಕೂಟ 17.9ಲಬ್ಯಾ, ಸೌದಿ ಅರೇಬಿಯಾ 8.2 ಲಬ್ಯಾ, ದಕ್ಷಿಣ ಕೊರಿಯಾ 7.9 ಲಬ್ಯಾ, ಇರಾನ್ 7.1 ಲಬ್ಯಾ, ಯುಎಇ 3.4 ಲಬ್ಯಾ, ಭಾರತ 2.1 ಲಬ್ಯಾ.

