HomeFresh Newsಜಾವಾ ಪ್ಲಮ್ ಎನಲ್ಪಡುವ ನೇರಳೆ | ಸಿಜಿಗಿಯಮ್ ಕುಮಿನಿ ಎಂಬ ನೇರಳೆ | ಮಲಬಾರ್ ಪ್ಲಮ್...

ಜಾವಾ ಪ್ಲಮ್ ಎನಲ್ಪಡುವ ನೇರಳೆ | ಸಿಜಿಗಿಯಮ್ ಕುಮಿನಿ ಎಂಬ ನೇರಳೆ | ಮಲಬಾರ್ ಪ್ಲಮ್ ನೆರೋಲ್ ಜಮೂನ್

ನೇರಳೆ ಹಣ್ಣಿನ ಮೂಲ ಇಂಡೋನೇಶಿಯಾದ ಜಾವಾ ಎನ್ನಲಾಗಿದ್ದು ಅದನ್ನು ಇಂಗ್ಲಿಷಿನಲ್ಲಿ ಜಾವಾ ಪ್ಲಮ್ ಎನ್ನುತ್ತಾರೆ.

ಭಾರತದಲ್ಲಿ ಬಹು ಹಿಂದೆಯೇ ಇತ್ತು ಎಂಬುದು ವಾದ. ಜಮುನಾ ನದಿಯ ಹೆಸರು ಹಾಗೆ ಎನ್ನುತ್ತಾರೆ. ಒಟ್ಟಾರೆ ದಕ್ಷಿಣ ಏಶಿಯಾ ಮೂಲದ ಹಣ್ಣು ಇದು. ಹಾಗಾಗಿ ಇದಕ್ಕೆ ಮಲಬಾರ್ ಪ್ಲಮ್, ಬ್ಲ್ಯಾಕ್ ಪ್ಲಮ್ ಬ್ಲ್ಯಾಕ್ ಬೆರಿ, ಜಮೂನ್ ಎಂಬಿತ್ಯಾದಿ ಹೆಸರುಗಳು ಇವೆ.

ಯುಎಸ್‌ಎಯ ಫ್ಲೋರಿಡಾ, ತೆಂಕಣ ಆಫ್ರಿಕಾ, ಕೆರಿಬಿಯನ್ ದ್ವೀಪಗಳಿಗೆಲ್ಲ ಪರಿಚಯಿಸಿದ ಮೇಲೆ ಅಲ್ಲೂ ಜೋರಾಗಿ ಬೆಳೆಯುತ್ತಿದೆ. ಆಸ್ಟ್ರೇಲಿಯಾದಲ್ಲಿ ಒಂದು ನೇರಳೆ ತಳಿ ಇದೆ. ಅದೇ ಎಲ್ಲ ಕಡೆಯ ನೇರಳೆ ಹಣ್ಣುಗಳಿಗೆ ಮೂಲ ಎಂದು ಕೂಡ ಕೆಲವರು ವಾದಿಸಿ ಬರೆದಿದ್ದಾರೆ.

ಗುಳ್ಳೆನರಿ, ಬಾವಲಿ, ಪುನುಗು ಬೆಕ್ಕು ಮೊದಲಾದವು ಈ ಹಣ್ಣನ್ನು ಹುಡುಕಿ ತಿನ್ನುತ್ತವೆ. ಸಿಹಿ ಹಣ್ಣಾದರೂ ತುಸು ಒಗರುಹುಳಿ ಇರುವುದಿದೆ. ನೇರ ತಿನ್ನುವುದಲ್ಲದೆ ಸಾಸ್, ಜಾಮ್, ಜ್ಯೂಸ್, ಜೆಲ್ಲಿ, ಶರ್ಬತ್, ಸಿರಪ್ ಮೊದಲಾದವನ್ನು ತಯಾರಿಸುತ್ತಾರೆ.

ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್ ಸಿ, ಖನಿಜಗಳು ಇತ್ಯಾದಿ ಇರುವ ಹಣ್ಣು ಇದು. ನೇರಳೆ ಹೆಸರು ಅದರ ತಿರುಳು ಬಣ್ಣದಿಂದ ಬಂದಿದೆ.

ಇದರ ಮರವನ್ನು ಬಟ್ಟಿಯಲ್ಲಿ ಒಣಗಿಸಿದರೆ ನೀರು ನಿರೋಧಕ ಆಗುತ್ತದೆ. ಹಾಗಾಗಿ ಹಿಂದೆ ರೈಲು ಹಳಿಯ ಸ್ಲೀಪರ್ ಮರಗಳಾಗಿ ಬಳಸುವವುಗಳಲ್ಲಿ ನೇರಳೆ ಮರಕ್ಕೆ ಮಹತ್ವವಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments