ಬಂಟ್ವಾಳ: ಚಿತ್ರನಟಿ ರಚಿತರಾಮ್ ಅವರು ತಾಲೂಕಿನ ಬೆಂಜನಪದವಿನಲ್ಲಿರುವ ತುಳುನಾಡ ಕಾರಣಿಕ ದೈವ ಶ್ರೀ ಕೊರಗಜ್ಜ ಸನ್ನಧಿಗೆ ಶನಿವಾರ ರಾತ್ರಿ ಭೇಟಿ ನೀಡಿ ಹರಕೆಯ ಕೋಲ ಸೇವೆ ಅರ್ಪಿಸಿದರು. ಬೆಂಜನಪದವಿನ ಶ್ರೀ ಕೊರಗಜ್ಜ ಸನ್ನಿಧಿ ಕಾರಣಿಕ ಕ್ಷೇತ್ರವಾಗಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ ತಮ್ಮ ಇಷ್ಠಾರ್ಥಗಳನ್ನು ದೈವರ ಮುಂದೆ ಹರಕೆ ಹೇಳಿಕೊಳ್ಳುತ್ತಾರೆ. ತಮ್ಮ ಹರಕೆಗಳು ಈಡೇರಿದಾಗ ಸೇವೆಗಳನ್ನು ನೀಡುವುದು ರೂಢಿಯಲ್ಲಿದೆ.

ಅಂತೆಯೇ ನಟಿ ರಚಿತರಾಮ್ ಕೂಡ ಬೆಂಜನಪದವು ದೈವಕ್ಷೇತ್ರಕ್ಕೆ ಆಗಾಗ್ಗೆ ಭೇಟಿ ನೀಡಿ ಸೇವೆ ನೀಡುತ್ತಿರುತ್ತಾರೆ. ಶನಿವಾರ ತನ್ನ ಆಪ್ತರೊಂದಿಗೆ ದೈವ ಕ್ಷೇತ್ರಕಕೆ ಆಗಮಿಸಿದ ರಚಿತ ರಾಮ್ ಕೋಲ ಸೇವೆಯನ್ನು ನೀಡಿದರು. ಅತ್ಯಂತ ಭಕ್ತಿಭಾವದಿಂದ ಶ್ರೀ ಕೊರಗಜ್ಜ ದೈವದ ಕೋಲವನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ, ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ವಿಜಯ್, ಸೌಮ್ಯ ವಿಜಯ್ ಮತ್ತಿತರರು ಉಪಸ್ಥಿತರಿದ್ದರು
