ಪುತ್ತೂರು: ರಸ್ತೆ ಬದಿ ಹಾಗೂ ಸರಕಾರಿ ಜಾಗದಲ್ಲಿರುವ ಕಾಟು ಮಾವಿನ ಮರದಿಂದ ಮಿಡಿ ಕೊಯ್ಯದಂತೆ ಅರಣ್ಯ ಇಲಾಖೆಯ ಮೂಲಕ ಸರಕಾರ ಆದೇಶ ಹೊರಡಿಸಬೇಕು ಎಂದು ಶಾಸಕ ಅಶೋಕ್ ರೈ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರಖಂಡ್ರೆಗೆ ಮನವಿ ಸಲ್ಲಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಗೇರು ನಿಗಮದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಸರಕಾರಿ ಜಾಗ ಹಾಗೂ ರಸ್ತೆ ಬದಿಯಲ್ಲಿರುವ ಕಾಟು ಮಾವಿನ ಮರದಿಂದ ಯಾವುದೇ ಕಾರಣಕ್ಕೂ ಮಿಡಿ ಕೊಯ್ಯಬಾರದು. ಪ್ರತೀ ಬೇಸಿಗೆಯಲ್ಲಿ ಕೆಲವೊಂದು ಇಲಾಖೆಗಳು ಮಾವಿನ ಮರಗಳನ್ನು ಏಲಂ ಮಾಡುವ ಕೆಲಸವನ್ನು ಮಾಡುತ್ತದೆ. ಚಿಲ್ಲರೆ ಹಣಕ್ಕಾಗಿ ಈ ಏಲಂ ಕ್ರಿಯೆ ನಡೆಯುತ್ತದೆ. ಮಾವಿನ ಮಿಡಿ ಕೊಯ್ಯುವಾಗ ಮರ ಅರ್ಧ ಹಾನಿಗೊಳಗಾಗುತ್ತದೆ. ಕಾಟು ಮಾವು ಹಣ್ಣಾಗಲಿ, ಪಕ್ಷಿಗಳು,ಪ್ರಾಣಿಗಳು, ಮನುಷ್ಯರು ತಿನ್ನಲಿ ಎಂದು ಹೇಳಿದರು. ರಸ್ತೆ ಬದಿಯಲ್ಲಿ ಯಾವುದೋ ಮರವನ್ನು ನೆಡುವ ಬದಲು ಕಾಟು ಮಾವು ಸೇರಿದಂತೆ ಹಣ್ಣಿನ ಮರಗಳನ್ನು ನೆಡುವಂತೆಯೂ ಆದೇಶ ಹೊರಡಿಸಬೇಕು ಎಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದರು.
ಕಾಟು ಮಾವಿನ ಮಿಡಿ ಕೊಯ್ಯದಂತೆ ಇಲಾಖೆಯಿಂದ ಆದೇಶ ಹೊರಡಿಸಿ: ಅರಣ್ಯಸಚಿವರಿಗೆಶಾಸಕ ಅಶೋಕ್ ರೈ ಮನವಿ
RELATED ARTICLES
