
ಇಟಾಲಿಯನ್ ಓಪನ್ ಗೆಲ್ಲುವುದರೊಂದಿಗೆ ಇಟೆಲಿಯ ಆಟಗಾರ ಜಾನಿಕ ಸಿನ್ನರ್ ಅವರು ಗೋಲ್ಡನ್ ಮಾಸ್ಟರ್ಸ್ ಪೂರ್ಣಗೊಳಿಸಿದ ಏಕೈಕ ಇಟಾಲಿಯನ್ ಎನಿಸಿದರು.

ಇಟೆಲಿಯು ಐವತ್ತು ವರುಷಗಳ ಬಳಿಕ ಇಂತಾ ಒಂದು ದಾಖಲೆ ಮಾಡುವುದಕ್ಕೆ ಜಾನಿಕ್ ಸಿನ್ನರ್ ಕಾರಣರಾದರು.

ಎಟಿಪಿ ಅಗ್ರ ರ್‍ಯಾಂಕಿನ ಎಲ್ಲ ಟೂರ್ನಿಗಳನ್ನು ಜಯಿಸುವುದನ್ನು ಗೋಲ್ಡನ್ ಮಾಸ್ಟರ್ಸ್ ಎನ್ನಲಾಗುತ್ತದೆ.

ಒಂಬತ್ತು ಮಾಸ್ಟರ್ಸ್-೧೦೦೦ ರ್‍ಯಾಂಕಿಂಗ್ ಪಂದ್ಯಾವಳಿಗಳು ಇವೆ.

ಜಾನಿಕ್ ಸಿನ್ನರ್ ಅವೆಲ್ಲವನ್ನೂ ಗೆದ್ದ ಸಾಧನೆ ಮಾಡಿದರು.

ಇದಕ್ಕೆ ಮೊದಲು ನೊವಾಕ್ ಜಾಕೋವಿಕ್ ಮಾತ್ರ ಗೋಲ್ಡನ್ ಮಾಸ್ಟರ್ಸ್ ಸಾಧನೆ ಮಾಡಿದ್ದಾರೆ.

ಫೈನಲಿನಲ್ಲಿ ಕ್ಯಾಸ್ಪರ್ ರೂಡ್‌ರನ್ನು ೬-೪, ೬-೪ ನೇರ ಸೆಟ್‌ಗಳಿಂದ ಸೋಲಿಸಿ ಇಟಾಲಿಯನ್ ಓಪನ್ ಸಿಂಗಲ್ಸ್ ಚಾಂಪಿಯನ್ ಆದರು.

ಮುಂದಿನ ವಾರ ಆರಂಭವಾಗುವ ಫ್ರೆಂಚ್ ಓಪನ್‌ಗೆ ಸಿನ್ನರ್ ಈ ಮೂಲಕ ಭರ್ಜರಿಯಾಗಿ ತಯಾರಾದರು.

ಮೂರು ಕಡೆ ಗ್ರಾನ್‌ಸ್ಲಾಮ್ ಗೆದ್ದಿರುವ ಪ್ಯಾರಿಸ್ ಆವೆ ಮಣ್ಣಿನ ಅಂಗಳದಲ್ಲಿ ಗೆದ್ದರೆ ಪರಿಪೂರ್ಣ ಗ್ರಾನ್‌ಸ್ಲಾಂ ಸಾಧಕರ ಪಟ್ಟಿಗೆ ಸೇರಲು ಕೂಡ ಅವಕಾಶವಿದೆ.

