HomeFresh Newsನ.14 : ತುಳುನಾಡಿನ ಇತಿಹಾಸ ಅಧ್ಯಯನ ಕೃತಿ ‘ಕೆಲ್ಲ ಪುತ್ತಿಗೆಯ ಕೆಲ್ಲರು’ ಬಿಡುಗಡೆ

ನ.14 : ತುಳುನಾಡಿನ ಇತಿಹಾಸ ಅಧ್ಯಯನ ಕೃತಿ ‘ಕೆಲ್ಲ ಪುತ್ತಿಗೆಯ ಕೆಲ್ಲರು’ ಬಿಡುಗಡೆ

ಮಂಗಳೂರು: ಹಿರಿಯ ಇತಿಹಾಸ ಅಧ್ಯಯನ ತಜ್ಞ ಡಾ. ಪಿ.ಎನ್. ನರಸಿಂಹ ಮೂರ್ತಿ ಅವರು ಬರೆದಿರುವ ತುಳು ಅಕಾಡೆಮಿ ಪ್ರಕಟಿತ ‘ಕೆಲ್ಲ ಪುತ್ತಿಗೆಯ ಕೆಲ್ಲರು’ ಕೃತಿ ಬಿಡುಗಡೆ ಸಮಾರಂಭವು ನ.14 ರ ಸಂಜೆ 4.30ಕ್ಕೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.

ತುಳುನಾಡಿನಲ್ಲಿ ಅಳುಪ ವಂಶದ ಒಂದು ಸಾವಿರ ವರ್ಷಗಳ ಆಳ್ವಿಕೆಯ ಸಂದರ್ಭದಲ್ಲಿ ಅವರ ಸೇನಾ ಮುಖ್ಯಸ್ಥರಾಗಿದ್ದ ಕೆಲ್ಲರು ತೋರಿದ್ದ ಸಾಹಸ, ನಿಷ್ಠೆಯನ್ನು ಶಾಸನಗಳ ದಾಖಲೆ ಸಮೇತ ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.‌
ಡಾ‌.‌ಪಿ.ಎನ್. ನರಸಿಂಹಮೂರ್ತಿ ಅವರು ಕಳೆದ 35 ವರ್ಷಗಳ ನಿರಂತರ ಅಧ್ಯಯನದ ಮುಖಾಂತರ ಈ ಕೃತಿಯನ್ನು ರಚಿಸಿದ್ದಾರೆ.‌
ಕನ್ನಡದ ಮೊದಲ ಹಲ್ಮಿಡಿ ಶಾಸನದಲ್ಲಿಯೂ ಕೆಲ್ಲರ ಬಗ್ಗೆ ಹಾಗೂ ತುಳುನಾಡಿನ ಬಗ್ಗೆ ಉಲ್ಲೇಖಗಳಿರುವುದನ್ನು ವಿಮರ್ಶೆ ಮಾಡಿ ಕೆಲ್ಲರು ಕರ್ನಾಟಕದಾದ್ಯಂತ ಬೀರಿದ್ದ ಪ್ರಭಾವವನ್ನು ಈ ಕೃತಿಯಲ್ಲಿ ನರಸಿಂಹಮೂರ್ತಿ ಅವರು ಅನಾವರಣಗೊಳಿಸಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸುವರು.
ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಮುಖ್ಯಸ್ಥ ಡಾ.ತುಕರಾಮ ಪೂಜಾರಿ ಕೃತಿ ಬಿಡುಗಡೆಗೊಳಿಸಿ, ಕೃತಿ ಅವಲೋಕನ ನಡೆಸುವರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕೆಲ್ಲ ವಂಶಸ್ಥರಾದ ಕೆ.ಪಿ.ಜಗದೀಶ ಅಧಿಕಾರಿ, ‘ಉಡಲ್’ ತುಳು ಪತ್ರಿಕೆಯ ಸಂಪಾದಕಿ ಜಯಂತಿ ಎಸ್ ಬಂಗೇರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ತುಳು ಅಕಾಡೆಮಿ ಪ್ರಕಟಣೆ ತಿಳಿಸಿದೆ.

Swarna jewellery - 2
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments