HomeEntertainmentಮಕಾಪುನೊ ತೆಂಗಿನಕಾಯಿ | ಜೆಲ್ಲಿ ತುಂಬಿರುವ ತೆಂಗಿನಕಾಯಿ |ಫಿಲಿಪ್ಪೀನ್ಸ್‌ನ ವಿಶೇಷ ತೆಂಗು

ಮಕಾಪುನೊ ತೆಂಗಿನಕಾಯಿ | ಜೆಲ್ಲಿ ತುಂಬಿರುವ ತೆಂಗಿನಕಾಯಿ |ಫಿಲಿಪ್ಪೀನ್ಸ್‌ನ ವಿಶೇಷ ತೆಂಗು

ಉಷ್ಣವಲಯದ ಕಡಲ ತಡಿಯವರಿಗೆಲ್ಲ ತೆಂಗಿನಕಾಯಿ ಪರಿಚಿತ, ಆದರೆ ಮಕಾಪುನೊ ತೆಂಗಿನಕಾಯಿ ಎಲ್ಲದರಂತಲ್ಲ.

ಫಿಲಿಪ್ಪೀನ್ಸ್ ದೇಶದ ವಿಶೇಷವಾದ ತೆಂಗಿನಕಾಯಿ ಮಕಾಪುನೊ. ನಾವು ತೆಂಗಿನಕಾಯಿ ಒಡೆದಾಗ ಅದರ ನಡುವೆ ನೀರು ಇರುತ್ತದೆ. ಆದರೆ ಮಕಾಪುನೊ ತೆಂಗಿನಕಾಯಿ ಒಡೆದಾಗ ನಡುವೆ ಮೃದು ಪಾರದರ್ಶಕವಾದ ಜೆಲ್ಲಿ ನೋಡಬಹುದು. ಇದು ವಿಟಮಿನ್ ಭರಿತ ಬಹುತೇಕ ಸುಕ್ರೋಸ್ ಸಕ್ಕರೆ ಅಂಶದ ರುಚಿಯದಾಗಿದೆ.

ಐಸ್ಕ್ರೀಮ್, ಫ್ಯಾಸ್ಟ್ರಿ, ಕೇಕ್, ಕ್ಯಾಂಡಿ, ಬಿವರೇಜ್‌ನಲ್ಲೆಲ್ಲ ಬಳಸುವ ಇದನ್ನು ನೇರವಾಗಿ ಜೆಲ್ಲಿಯಂತೆ ತಿನ್ನಬಹುದು. ಇದನ್ನು ಆಹಾರ ಅಡುಗೆ ಎಲ್ಲದರಲ್ಲೂ ಬಳಸುತ್ತಾರೆ.

ಇದು ಮೂಲದಲ್ಲಿ ಫಿಲಿಪ್ಪೀನ್ಸ್, ಇಂಡೋನೇಶಿಯಾದ ಕೆಲವು ದ್ವೀಪಗಳ ಮಳೆ ಕಾಡು ಮರವಾಗಿತ್ತು.

1931 ರಲ್ಲಿ ಎಡ್ವಿನ್ ಕಾಪ್‌ಲ್ಯಾಂಡ್ ಇದನ್ನು ಸಸ್ಯ ಶಾಸ್ತ್ರ ರೀತ್ಯಾ ಜಗತ್ತಿಗೆ ಪರಿಚಯಿಸಿದ. 1960ರಿಂದ ಫಿಲಿಪ್ಪೀನ್ಸ್‌ನಲ್ಲಿ ಇದು ವಾಣಿಜ್ಯ ಬೆಳೆಯಾಗಿ ಬಲಿಯಿತು. ಆಗ್ನೇಯ ಏಶಿಯಾದ ಹಲವು ಕಡೆ ಇದನ್ನು ಬೆಳೆಯಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments