HomeFresh Newsಆಳ್ವಾಸ್‌ ನಲ್ಲಿ ಮುದ್ರಣ ಸೇವೆ ಆರಂಭ | ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

ಆಳ್ವಾಸ್‌ ನಲ್ಲಿ ಮುದ್ರಣ ಸೇವೆ ಆರಂಭ | ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಆಳ್ವಾಸ್ ಪ್ರಿಂಟಿಂಗ್ ಯುನಿಟ್ ‘’ಲಿಪಿ” ಮುದ್ರಣಾಲಯವನ್ನು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು. ‘
ನಂತರ ಮಾತನಾಡಿದ ಆಳ್ವ ಅವರು ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ಮಹತ್ವದ ಹೆಜ್ಜೆಯಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸ್ಪರ್ಧಾತ್ಮಕ ವೆಚ್ಚದಲ್ಲಿ ಉತ್ಕೃಷ್ಟ ಮುದ್ರಣ ಸೇವೆಗಳನ್ನು ನೀಡಲಾಗುವುದು.
ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಈ ಮುದ್ರಣ ಘಟಕವು ಶಿಕ್ಷಣ, ವಾಣಿಜ್ಯ ಹಾಗೂ ಸಾರ್ವಜನಿಕ ಮುದ್ರಣ ಸೇವೆಗಳ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕ ವಿನ್ಯಾಸ, ಸ್ಪಷ್ಟ ಮುದ್ರಣ ಹಾಗೂ ಸಮಯಕ್ಕೆ ಸರಿಯಾದ ವಿತರಣೆಯ ಮೂಲಕ ವಿಶ್ವಾಸಾರ್ಹ ಸೇವೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಡಿಜಿಟಲ್ ಮತ್ತು ಆಫ್‌ಸೆಟ್ ಮುದ್ರಣ ವ್ಯವಸ್ಥೆಗಳ ಮೂಲಕ ಕಡಿಮೆ ಪ್ರಮಾಣದಿಂದ ಹಿಡಿದು ಬೃಹತ್ ಪ್ರಮಾಣದ ಮುದ್ರಣ ಕಾರ್ಯಗಳನ್ನೂ ಇಲ್ಲಿ ನಿರ್ವಹಿಸಲಾಗುತ್ತದೆ ಎಂದರು.


“ಲಿಪಿ” ಮುದ್ರಣ ಘಟಕದಲ್ಲಿ ಸಿಟಿಪಿ, ಆಫ್‌ಸೆಟ್ ಮುದ್ರಣದಲ್ಲಿ 1-ಕಲರ್, 2-ಕಲರ್, 4-ಕಲರ್ ಯಂತ್ರಗಳು, ಡಿಜಿಟಲ್ ಪ್ರಿಂಟ್ ಸೇವೆಗಳು, ಕಟಿಂಗ್ ಮಷೀನ್, ಬೈಂಡಿAಗ್ ಮಷೀನ್, ಫೋಲ್ಡಿಂಗ್ ಮಷೀನ್, ಲ್ಯಾಮಿನೇಷನ್ ಮಷೀನ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಪ್ಯಾಂಪ್ಲೆಟ್‌ಗಳು, ಬ್ರೋಶರ್‌ಗಳು, ಫ್ಲೈಯರ್‌ಗಳು, ಆಹ್ವಾನ ಪತ್ರಿಕೆಗಳು, ರಿಜಿಸ್ಟರ್‌ಗಳು, ಲೆಡ್ಜರ್‌ಗಳು, ವಿಸಿಟಿಂಗ್ ಕಾರ್ಡ್ಗಳು, ಬಿಸಿನೆಸ್ ಕಾರ್ಡ್ಗಳು, ಬಿಲ್ ಬುಕ್‌ಗಳು, ರಸೀದಿ ಪುಸ್ತಕಗಳು ಹಾಗೂ ವಿವಿಧ ಸ್ಟೇಷನರಿ ಮುದ್ರಣ ಕಾರ್ಯಗಳ ಸೇವೆಯನ್ನು ನೀಡಲಾಗುತ್ತದೆ. ಡಿಜಿಟಲ್ ಮತ್ತು ಆಫ್‌ಸೆಟ್ ಮುದ್ರಣ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿದ್ದು, ಬಲ್ಕ್ ಆರ್ಡರ್‌ಗಳನ್ನೂ ಸ್ವೀಕರಿಸಲಾಗುತ್ತದೆ.
ಕರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ಜೀವನರಾಮ್ ಸುಳ್ಯ, ಬಾಲಕೃಷ್ಣ ಶೆಟ್ಟಿ, ಲಿಪಿ ಮುದ್ರಣಾಲಯದ ಮೇಲ್ವಿಚಾರಕ ಶಾಂತರಾಮ್ ನಾಯಕ್, ಕಾಲೇಜುಗಳ ಪ್ರಾಂಶುಪಾಲರು, ಇನ್ನಿತರ ಪ್ರಮುಖರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments