ಗೌರೀಶಂಕರ ಶಿಖರವನ್ನು ಯಶಸ್ವಿಯಾಗಿ ಹತ್ತಿದ ಬಳಿಕ ಇಳಿಯುವ ಸಂದರ್ಭದಲ್ಲಿ ಮೂವರು ಭಾರತೀಯ ಪರ್ವತಾರೋಹಿಗಳು ಪ್ರಪಾತಕ್ಕೆ ಬಲಿಯಾಗಿದ್ದಾರೆ.

ನೇಪಾಳ ಪರ್ವತಾರೋಹಿ ಸಂಘದ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಇದನ್ನು ಸ್ಪಷ್ಟಪಡಿಸಿ ಹೇಳಿಕೆ ನೀಡಿದ್ದಾರೆ.

ಮಾರ್ಗದರ್ಶಿ ಶೆರ್ಪಾಗಳು ಪ್ರಯತ್ನಿಯೂ ಪರ್ವತಾರೋಹಿಗಳನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.

ಪರ್ವತಾರೋಹಿ ಅರುಣ್ ತಿವಾರಿ ಹಾಗೂ ಸಾನಿಕಾ ಶಾ ಮೃತರು. ಅವರು ಒಟ್ಟಿಗೆ ಬೆಟ್ಟ ಏರಿಲ್ಲ ಇಲ್ಲವೇ ಇಳಿದಿಲ್ಲ.

ಆದರೆ ಒಂದೇ ದಿನ ಒಂದೆರಡು ಗಂಟೆಗಳ ವ್ಯತ್ಯಾಸದಲ್ಲಿ ಭಾರತ ಮೂಲದ ಈ ಇಬ್ಬರು ಬೆಳ್ಳಿ ಬೆಟ್ಟ ಹತ್ತಿದವರು ಮರಣ ಕಂಡಿದ್ದಾರೆ; ಮತ್ತೂ ಒಬ್ಬರು ಕೊನೆಯುಸಿರು ಎಳೆದಿದ್ದಾರೆ.

ಅದೂ ಯಶಸ್ವಿಯಾಗಿ ಎವರೆಸ್ಟ್ ಹತ್ತಿ ಇಳಿಯುವಾಗ ಈ ದುರಂತ ಸಂಭವಿಸಿದೆ. ಬುಧವಾರ ದಾಖಲೆಯ ೨೭೪ ಜನರು ಎವರೆಸ್ಟ್ ಏರಿದ್ದರು. ಗುರುವಾರ ಇಳಿಯುವಾಗ ತಳ ಶಿಬಿರ ಊರಿದ್ದರು.

ಆದರೆ ಅನಂತರ ಆದುದು ದುರಂತ. ಹತ್ತಿದವರಲ್ಲಿ ಗಡಿ ಭದ್ರತಾ ದಳದ ಮೌಂಟೆನೇರಿಂಗ್ ಮಹಿಳಾ ತಂಡವೂ ಇತ್ತು. ಅವರಲ್ಲಿ ಸಾನಿಕಾ ಶಾ ಮಂಜು ಗಣಿಗೆ ಬಲಿಯಾಗಿದ್ದಾರೆ.

ಹಾಗೆಯೇ ಇನ್ನೊಂದು ತಂಡದಲ್ಲಿದ್ದ ಅರುಣ್ ತಿವಾರಿ ಕೂಡ ಇಳಿಯುವ ಹಾದಿಯಲ್ಲಿ ಮರಣಿಸಿದ್ದಾರೆ. ಹಿಲರಿ ಸ್ಟೆಪ್ ಬಳಿ ತಿವಾರಿ ಕೊನೆಯುಸಿರೆಳೆದಿದ್ದಾರೆ. ಅವರ ತಂಡದ ಸಂದೀಪ್‌ರನ್ನು ಶೆರ್ಪಾಗಳು ರಕ್ಷಿಸಿ ಎರಡನೆಯ ಕ್ಯಾಂಪಿಗೆ ತಂದರಾದರೂ ಅವರು ಅಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ.

