HomeFresh Newsಬೈಜೂಸ್‌ನ ಬೈಜು ರವೀಂದ್ರನ್‌ಗೆ ಜೈಲು

ಬೈಜೂಸ್‌ನ ಬೈಜು ರವೀಂದ್ರನ್‌ಗೆ ಜೈಲು

2011ರಲ್ಲಿ ಹುಟ್ಟಿ ಭಾರೀ ಮೇಲಕ್ಕೇರಿ ಬೇಗ ಜಾರಿ ಬಿದ್ದ ಬೈಜೂಸ್ ಸ್ಥಾಪಕ ಬೈಜು ರವೀಂದ್ರನ್‌ಗೆ ಸಿಂಗಾಪುರ ಕೋರ್ಟು ಆರು ತಿಂಗಳಿನ ಜೈಲು ಶಿಕ್ಷೆ ನೀಡಿದೆ.
2022ರಲ್ಲಿ ಬೈಜೂಸ್ ಕೆರಿಯರ್ ಕಟ್ಟುವ ಕೆಲಸದಲ್ಲಿ2200ಕೋಟಿ ಡಾಲರ್ ಮೌಲ್ಯದ ಕಂಪೆನಿಯಾಗಿ ಬೆಳೆದಿತ್ತು

ಬೈಜು ರವೀಂದ್ರನ್ ಭಾರತದ ಸ್ಟಾರ್ಟಸ್ ಸೆಲೆಬ್ರಿಟಿಯಾಗಿ ಬೆಳೆದಿದ್ದರು. ಆದರೆ ಅದಾಗಲೇ ಬೀಳುಗೆ ಆರಂಭವಾಗಿತ್ತು. ಸಾಲದ ಹೊರೆ ಬೆಟ್ಟವಾಗಿತ್ತು, ಆಡಿಟ್ ತಡವಾಗಿತ್ತು, ಹೂಡಿಕೆ ಮಾಡಿದವರು ಸಿಟ್ಟುಗೊಂಡಿದ್ದರು. ರವೀಂದ್ರನ್ ಮೌಲ್ಯ ತಡವಿಲ್ಲದೆ ಪಾತಾಳ ಕಂಡಿತ್ತು.

ರವೀಂದ್ರನ್ ತನ್ನ ಸಂಪತ್ತಿನ ಬಗೆಗೆ ಕೋರ್ಟು ನೀಡಿದ್ದ ಆದೇಶ ಉಲ್ಲಂಘಿಸಿದ್ದಾರೆ ಎಂದು ಸಿಂಗಾಪುರ ಕೋರ್ಟು ಅವರಿಗೆ ಆರು ತಿಂಗಳ ಜೈಲೂಟದ ಶಿಕ್ಷೆ ವಿಧಿಸಿದೆ. ಏರುಮುಖ ಕೀರ್ತಿಯು ನೆಲಕ್ಕೆ ಬಿದ್ದುದರಲ್ಲಿ ಇದು ಒಂದು ಸಣ್ಣ ಕೀಲುಮುರಿ ಅಷ್ಟೆ ಎನ್ನಲಾಗಿದೆ. ಆರಂಭವಾದುದು ತಿಂಕ್ ಆಂಡ್ ಲರ್ನ್ ಪ್ರೆöÊವೇಟ್ ಲಿಮಿಟೆಡ್ ಎಂದು, ಬೇಗನೆ ಸ್ಟಾರ್ಟಪ್ ಕಾರ್ಪೊರೇಟ್ ಆಗಿ ಅದು ಬೆಳೆದಿದೆ.

ಕೊರೋನಾ ಕಾಲ ಹಿನ್ನಡೆಗೆ ಇನ್ನೊಂದು ಕಾರಣ. ವಿದೇಶೀ ಹೂಡಿಕೆದಾರರು ನೀಡಿದ್ದ ಸಾಲ ೧೨೦ ಕೋಟಿ ಡಾಲರ್ ಇತ್ತು. ಬಡ್ಡಿ, ಡಿವಿಡೆಂಡ್ ಕಟ್ಟದೆ ಹೊರೆ ದೊಡ್ಡದಾಯಿತು. 2022ರಲ್ಲಿ ನಷ್ಟ 4,588 ಕೋಟಿ ರೂಪಾಯಿ ಎಂಬ ಆಡಿಟ್ ತಡವಾಗಿ ಹೊರಬಿತ್ತು. ಹೂಡಿಕೆದಾರರು ಉರಿದು ಬಿದ್ದರು. ರವೀಂದ್ರನ್ ಮುಖ ಮುಚ್ಚಿ ಓಡಾಡಬೇಕಾಯಿತು. ಕೆಲವು ಕಲಿಕಾ ನೆಲೆಗಳನ್ನು ಹೂಡಿಕೆದಾರರು ಕೆಲವರು ತಮ್ಮದೇ ಸ್ವಂತ ಮಾಡಿಕೊಂಡರು.

ಸಿಂಗಾಪುರದ ಕಂಪೆನಿ ಹೆಸರಿನಲ್ಲಿ ಬೈಜು ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಯುಎಸ್‌ಎ ಹೂಡಿಕೆದಾರರು ಕನಲಿದರು. ಕೊನೆಗೆ ಜೈಲು ಪಾಲಾಗಿದ್ದಾರೆ ಬೈಜು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments