ಮುಲ್ಕಿ ಸುಂದರ್ ರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್ ನಲ್ಲಿ ಸ್ಯಾಂಡಿಸ್ ಕಂಪನಿಯ ಆಶ್ರಯದಲ್ಲಿ ನಡೆದ ಕೋಸ್ಟಲ್ ಫಿಲಂ ಅವಾಡ್ಸ್೯ ನಲ್ಲಿ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ “ಜೈ” ತುಳು ಸಿನಿಮಾದಲ್ಲಿ ಅಕ್ಷರ್ ಜೆ ಶೆಟ್ಟಿಯ ಅಭಿನಯಕ್ಕಾಗಿ ಬಾಲನಟ ಪ್ರಶಸ್ತಿ ಲಭಿಸಿದೆ.
ಅಕ್ಷರ್ ಜೆ ಶೆಟ್ಟಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಮತ್ತು ಚಿತ್ರಾ ಜೆ ಶೆಟ್ಟಿ ದಂಪತಿಯ ಪುತ್ರ.ಅಕ್ಷರ್ ಜೆ ಶೆಟ್ಟಿ ಈ ಹಿಂದೆ ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ವಿರೇಂದ್ರ ಶೆಟ್ಟಿ ನಿರ್ದೇಶನದ ಚಾಲಿಪೊಲೀಲು ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿದ್ದಾನೆ. ತದನಂತರ
ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದ ದಬಕ್ ದಬಾ ಐಸಾ, ವೀರೇಂದ್ರ ಶೆಟ್ಟಿ ಅವರ ಮಗನೇ ಮಹಿಷ, ನಿತಿನ್ ರೈ ಕುಕ್ಕುವಳ್ಳಿಯವರ ಧರ್ಮಚಾವಡಿ ಹಾಗೂ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದಲ್ಲಿ ಅಭಿನಯಿಸಿ ಸ್ಯಾಂಡೀಸ್ ಕಂಪೆನಿಯ ಆಶ್ರಯದಲ್ಲಿ ನಡೆದ ಕೋಸ್ಟಲ್ ಫಿಲಂ ಅವಾಡ್ಸ್೯ನಲ್ಲಿ ಬಾಲ ನಟ ಪ್ರಶಸ್ತಿ ಪಡೆದಿದ್ದಾನೆ.


ಅಕ್ಷರ್ ಜೆ ಶೆಟ್ಟಿ ಅಭಿನಯಿಸಿದ ಕೆ ಸೂರಜ್ ಶೆಟ್ಟಿ ನಿರ್ದೇಶನದ “ಕತೆ ಕೈಲಾಸ” ಹಾಗೂ ಅರ್ಜುನ್ ದೇವ್ ನಿರ್ದೇಶನದ “ಟಾಸ್” ಸಿನಿಮಾ ಇನ್ನಷ್ಟೇ ತೆರೆಕಾಣ ಬೇಕಾಗಿದೆ.
ಅಕ್ಷರ್ ಜೆ ಶೆಟ್ಟಿ, ಕುಳಾಯಿ ರೆಹಾನಾ ಇಂಟರ್ ನ್ಯಾಷನಲ್ ಸ್ಕೂಲ್ ಇಲ್ಲಿಯ ವಿದ್ಯಾರ್ಥಿಯಾಗಿದ್ದಾನೆ. ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿರುವ ಅಕ್ಷರ್ ಕುಡ್ಲಾಸ್ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಅನಘಾಸ್ ಸ್ಕೇಟಿಂಗ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದಾನೆ. ಅಕಾಡೆಮಿ ಸ್ಪೀಡ್ ರೋಲರ್ ಸ್ಕೇಟಿಂಗ್ ಡಿಸ್ಟ್ರಿಕ್ಟ್ ಸೆಲೆಕ್ಷನ್ 2023 ರಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿ ನಾಲ್ಕನೇ ಸ್ಥಾನ ಗಳಿಸಿದ್ದಾನೆ. ಹುಬ್ಬಳ್ಳಿ, ಬೆಂಗಳೂರಿನಲ್ಲಿ ನಡೆದ ಸ್ಕೇಟಿಂಗ್ ಕ್ರೀಡೆಯ ಜೊತೆಗೆ ಪುಟ್ಬಾಲ್, ಕ್ರಿಕೆಟ್ ಪಂದ್ಯಾಟದಲ್ಲೂ ಕುಳಾಯಿ ರೆಹನಾ ಇಂಟರ್ ನ್ಯಾಷನಲ್ ಸ್ಕೂಲ್ ನ್ನು ಪ್ರತಿನಿಧಿಸಿ ಗೋವಾ ಮತ್ತು ಉಡುಪಿಯಲ್ಲಿ ನಡೆದ ಪಂದ್ಯಾಟದಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ.
