HomeFresh Newsಇರಾನ್ ವಶಪಡಿಸಿಕೊಂಡಿದ್ದ ಹಡಗು | ಅದರಲ್ಲಿದ್ದ ಹತ್ತು ಮಂದಿ ಭಾರತೀಯರು | ಬಹುತೇಕ ವರುಷದ ಬಳಿಕ...

ಇರಾನ್ ವಶಪಡಿಸಿಕೊಂಡಿದ್ದ ಹಡಗು | ಅದರಲ್ಲಿದ್ದ ಹತ್ತು ಮಂದಿ ಭಾರತೀಯರು | ಬಹುತೇಕ ವರುಷದ ಬಳಿಕ ಬಿಡುಗಡೆ

2025ರ ಜುಲಾಯಿ ತಿಂಗಳಿನಲ್ಲಿ ಇರಾನ್ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರಿನಲ್ಲಿದ್ದ ಹತ್ತು ಮಂದಿ ಭಾರತೀಯ ಸಿಬ್ಬಂದಿಯು ನಿರಂತರ ರಾಜತಾಂತ್ರಿಕ ಪ್ರಯತ್ನದ ಬಳಿಕ ಬಿಡುಗಡೆ ಕಂಡಿದ್ದಾರೆ.ಬಹುತೇಕ ವರುಷದ ಹೊತ್ತಿಗೆ ನಮ್ಮ ಪ್ರಯತ್ನ ಫಲ ಕಂಡಿದೆ.

ಹತ್ತು ಭಾರತೀಯ ಸಿಬ್ಬಂದಿಯನ್ನು ಇರಾನ್ ಬಿಡುಗಡೆ ಮಾಡಿದೆ ಎಂದು ಭಾರತದ ಶಿಪ್ಪಿಂಗ್ ಮಹಾ ನಿರ್ದೇಶನಾಲಯವು ಹೇಳಿದೆ. ಎಂವಿ ಹಾರ್ಬರ್ ಫೀನಿಕ್ಸ್ ಹಡಗನ್ನು ಇರಾನ್ ಕಡಲು ಕಾವಲು ಪಡೆ ಅಧಿಕಾರಿಗಳು 2025ರ ಜುಲಾಯಿ ತಿಂಗಳಲ್ಲಿ ವಶಕ್ಕೆ ತೆಗೆದುಕೊಂಡಿದ್ದರು. ಅದರಲ್ಲಿದ್ದ ಹತ್ತು ಮಂದಿ ಸಿಬ್ಬಂದಿಯ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನ ಮುಂದುವರಿದಿತ್ತು. ಕೊನೆಗೂ ಅದು ಫಲ ನೀಡಿದೆ. ಹಡಗು ನಿರ್ವಹಣಾ ಸಂಸ್ಥೆ ಆರ್‌ಪಿಎಸ್‌ಎಲ್ ತೆಹರಾನಿನಲ್ಲಿರು ಭಾರತೀಯ ರಾಯಭಾರ ಕಚೇರಿಯ ಜೊತೆಗೆ ಈ ಸಂಬಂಧ ಪ್ರಯತ್ನ ನಡೆಸಿತ್ತು.

ರಾಯಭಾರ ಕಚೇರಿಯು ವಿದೇಶಾಂಗ ಸಚಿವಾಲಯ, ಬಂದರು ಜಲಮಾರ್ಗ ಸಾಗಣೆ ಸಚಿವಾಲಯಗಳವರು ರಾಜತಾಂತ್ರಿಕ ಪ್ರಯತ್ನ ನಡೆಸಿದ್ದರು. ಹನ್ನೊಂದು ತಿಂಗಳಿಗೆ ಹತ್ತು ಭಾರತೀಯ ಹಡಗು ಸಿಬ್ಬಂದಿ ಬಿಡುಗಡೆಗೊಂಡಿದ್ದಾರೆ.ಮೂವತ್ತೆರಡು ವರುಷ ಹಳೆಯ ಈ ತೈಲ ಟ್ಯಾಂಕರ್ ಬೇರೆ ದೇಶಗಳಿಗೆ ಇಂಧನ ಸಾಗಿಸುವ ಕೆಲಸ ಮಾಡುತ್ತಿತ್ತು. ಈ ಹಡಗು ಕಚ್ಚಾ ತೈಲ ಕಳವು ಮಾಡಿದೆ ಎಂದು ಇರಾನ್ ಅದನ್ನು ಮುಟ್ಟುಗೋಲು ಹಾಕಿಕೊಂಡು ಸಿಬ್ಬಂದಿಯನ್ನು ಬಂಧಿಸಿತ್ತು ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments