HomeUncategorizedಪ್ರಪಂಚದ ಅತಿ ದೊಡ್ಡ ಮರುಭೂಮಿ ಸರೋವರ | ನೆಲವಾಸಿಗಳನ್ನು ದ್ವೀಪವಾಸಿ ಮಾಡುತ್ತಿರುವ ಸರೋವರ | ವಿಶ್ವ...

ಪ್ರಪಂಚದ ಅತಿ ದೊಡ್ಡ ಮರುಭೂಮಿ ಸರೋವರ | ನೆಲವಾಸಿಗಳನ್ನು ದ್ವೀಪವಾಸಿ ಮಾಡುತ್ತಿರುವ ಸರೋವರ | ವಿಶ್ವ ಪರಂಪರೆಯ ತಾಣ ಈ ಲೇಕ್ ತುರ್ಕಾನಾ

ಜಗತ್ತಿನ ಅತಿ ದೊಡ್ಡ ಮರುಭೂಮಿ ಸರೋವರವಾದ ತುರ್ಕಾನಾ ವಿಸ್ತರಿಸುತ್ತಿದ್ದು, ನೆಲವಾಸಿಗಳನ್ನು ಕುದುರು ವಾಸಿಗಳನ್ನಾಗಿ ಮಾಡುತ್ತಿದೆ.

240 ಕಿಲೋಮೀಟರ್ ಉದ್ದ ಹಾಗೂ 44 ಕಿಲೋಮೀಟರ್ ಅಗಲದ 6,805 ಚಕಿಮೀ ವಿಸ್ತಾರವಾದುದು ತುರ್ಕಾನಾ ಸರೋವರ.

ಕೆನ್ಯಾ ದೇಶದ ಬಡಗಣ ಭಾಗದ ಈ ಸರೋವರ ಕಳೆದೆರಡು ದಶಕಗಳಿಂದ ದೊಡ್ಡದಾಗುತ್ತಿದೆ. 2018ರಲ್ಲಿ ವಿಶ್ವಸಂಸ್ಥೆಯು ಇದನ್ನು ವಿಶ್ವ ಪರಂಪರೆಯ ತಾಣ ಮಾಡಿದೆ.

ಆಲ್ಪ್ರೆಡ್ ಲೆಂಕುಟರ್ ನೆಲವಾಸಿ ಆಗಿದ್ದರು. ಈಗ ದೊಡ್ಕೆರೆಯು ಅವರ ಊರನ್ನು ದ್ವೀಪ ಮಾಡಿದೆ.

ಸರಕಾರ ಅಕ್ಕಿ, ಬೀನ್ಸ್ ಪರಿಹಾರ ಕೊಡುತ್ತಿದೆ. ಉಳಿದಂತೆ ಇಲ್ಲಿ ಎಷ್ಟೋ ಶಾಲೆ, ಮನೆ, ಮೈದಾನ, ಹೊಲ ನೀರು ಪಾಲಾಗಿದೆಯಂತೆ.

ಮೀನುಗಾರರು ಮೀನು ಹಿಡಿಯುವುದರ ಜೊತೆಗೆ ಹೆಚ್ಚು ಮಾಂಸಕ್ಕಾಗಿ ನೀರಾನೆ ಬೇಟೆಯಾಡುತ್ತಾರಂತೆ.

ಹಾಗಾಗಿ ಹಿಪ್ಪೊಪೊಟಮಾಸ್‌ಗಳು ಅಳಿವಿನಂಚು ತಲುಪಿವೆ. ಆದರೆ ಮೊಸಳೆಗಳು ಹೆಚ್ಚಾಗಿವೆ. ತೊಂದರೆ ಇಲ್ಲ, ಇಲ್ಲಿನ ಕೆಲವು ಬುಡಕಟ್ಟುಗಳವರು ಮೊಸಳೆಗಳನ್ನೂ ತಿನ್ನುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments