HomeFresh Newsಯುಎಸ್‌ಎಯಲ್ಲಿ ಅಕ್ರಮ ವಾಸ | ಭಾರತ ಮೂಲದ ಚಾಲಕರ ಸೆರೆ | ಲಾರಿ ಓಡಿಸುವ 30...

ಯುಎಸ್‌ಎಯಲ್ಲಿ ಅಕ್ರಮ ವಾಸ | ಭಾರತ ಮೂಲದ ಚಾಲಕರ ಸೆರೆ | ಲಾರಿ ಓಡಿಸುವ 30 ಮಂದಿ ಬಂಧನ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಮೂವತ್ತು ಮಂದಿ ಟ್ರಕ್ ಓಡಿಸುವವರನ್ನು ಬಂಧಿಸಲಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಐವತ್ತೆರಡು ಜನರನ್ನು ಬಂಧಿಸಲಾಯಿತು. ಆ ಐವತ್ತೆರಡು ಜನರಲ್ಲಿ ಮೂವತ್ತಾರು ಮಂದಿ ಟ್ರಕ್ ಓಡಿಸುವವರಾಗಿದ್ದರು.

ಆ ಲಾರಿ ಚಾಲಕರಲ್ಲಿ ಮೂವತ್ತು ಮಂದಿ ಭಾರತ ಮೂಲದವರಾಗಿದ್ದಾರೆ. ಅಷ್ಟೇ ಅಲ್ಲ ಬಂಧಿತ ಭಾರತ ಮೂಲದ ಮೂವತ್ತು ಲಾರಿ ಓಡಿಸುವರ್‌ಗಳಲ್ಲಿ ಮೂವರು ಯಾವುದೇ ಡ್ರೈವಿಂಗ್ ಲೈಸೆನ್ಸ್ ಹೊಂದಿರಲಿಲ್ಲ.


ಯುಎಸ್ ಕಸ್ಟಮ್ಸ್ ಆಂಡ್ ಬಾರ್ಡರ್ಸ್ ರಕ್ಷಣಾ ಪಡೆಯವರು ಮೂವತ್ತು ಭಾರತೀಯ ಮೂಲದ ಟ್ರಕ್ ಚಾಲಕರು ಎಂದು ಹೇಳಿದ್ದಾರೆಯೇ ಹೊರತು ಅವರ ಬೇರೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಮೇ ಮಧ್ಯ ಭಾಗದಲ್ಲಿ ಅರಿಜೋನಾದ ಯೂಮ ವಿಭಾಗದಲ್ಲಿ ಈ ಬಂಧನವಾಗಿದ್ದು, ಅವರ ಪೂರ್ಣ ವಿಚಾರಣೆ ನಡೆದಿಲ್ಲ.

ಆಮೇಲೆ ಅವರನ್ನೆಲ್ಲ ಗಡಿಪಾರು ಮಾಡುವುದಾಗಿ ಹೇಳಲಾಗಿದೆ. ಬಂಧಿತ ಐವತ್ತೆರಡು ಜನರಲ್ಲಿ ಉಳಿದವರು ಮೆಕ್ಸಿಕೋ, ಎಲ್ ಸಾಲ್ವಡಾರ್ ಹಾಗೂ ರಶಿಯಾದವರು ಎನ್ನಲಾಗಿದೆ.


ಆಪರೇಶನ್ ಚೆಕ್‌ಮೇಟ್ ಮೂಲಕ ಕಾರ್ಯಾಚರಣೆಯಲ್ಲಿ ಈ ಬಂಧನ ನಡೆದಿದೆ. ಫ್ಲೋರಿಡಾದಲ್ಲಿ ಒಂಬತ್ತು ತಿಂಗಳ ಹಿಂದೆ ಭಾರತ ಮೂಲದ ಟ್ರಕ್ ಡ್ರೈವರ್ ಜಸನ್‌ಪ್ರೀತ್ ಸಿಂಗ್ ತಪ್ಪು ತಿರುವು ತೆಗೆದುಕೊಂಡು ಮೂವರ ಸಾವಿಗೆ ಕಾರಣನಾದ ಬಳಿಕ ಚಾಲಕರ ಪರಿಶೀಲನೆಗೆ ಆಪರೇಶನ್ ಚೆಕ್‌ಮೇಟ್ ನಡೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments