Homeಕರಾವಳಿಬೆಳ್ಳಾರೆ ಶಿವರಾಮ ಕಾರಂತ ಪ್ರ.ದ. ಕಾಲೇಜಿನಲ್ಲಿ ತುಳುನಾಡ್ದ ಉಲ್ಲಾಕುಳು ಆರಾಧನೆ - ವಿಚಾರ‌ ಕೂಟ

ಬೆಳ್ಳಾರೆ ಶಿವರಾಮ ಕಾರಂತ ಪ್ರ.ದ. ಕಾಲೇಜಿನಲ್ಲಿ ತುಳುನಾಡ್ದ ಉಲ್ಲಾಕುಳು ಆರಾಧನೆ – ವಿಚಾರ‌ ಕೂಟ

ತುಳುನಾಡಿನ ದೈವಾರಾಧನೆಯ ವ್ಯಾಪ್ತಿಯಲ್ಲಿ ಉಲ್ಲಾಕುಳು ದೈವದ ಆರಾಧನಾ ಕ್ರಮಗಳು ಅತ್ಯಂತ ವಿಶಿಷ್ಟವಾದದ್ದು ಹಾಗೂ ರಾಜನ್ ದೈವಗಳಿಗಳಿಗಿಂತಲೂ ಉಲ್ಲಾಕುಳು ದೈವದ ಸ್ಥಾನ ಮೇಲಸ್ಥರದ್ದಾಗಿರುತ್ತದೆ ಎಂದು ಜಾನಪದ ವಿದ್ವಾಂಸ ಡಾ.ಪೂವಪ್ಪ ಕಣಿಯೂರು ಹೇಳಿದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಸುಳ್ಯ ತಾಲೂಕಿನ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಲಾದ ತುಳು ನಾಡಿನ ಉಲ್ಲಾಕುಳು ಆರಾಧನೆಯ ಅನನ್ಯತೆಯ ಬಗ್ಗೆ ಅವರು ಉಪನ್ಯಾಸ ನೀಡಿದರು.


ಸೋದರ ಅವಳಿ ಪರಿಕಲ್ಪನೆಯ ಪೂಮಾಣಿ – ಕಿನ್ನಿಮಾಣಿ ಉಲ್ಲಾಕುಳು ದೈವದ ಆರಾಧನಾ ಪ್ರಸರಣಾ ವ್ಯಾಪ್ತಿಯು ಸುಳ್ಯದಿಂದ ಕುಂಬಳೆಯ ಪುತ್ತಿಗೆ ತನಕ ವ್ಯಾಪಿಸಿದೆ. ಆಕರ್ಷಕ ಸಿರಿ ಮುಡಿ ಹಾಗೂ ರಾಜಾಡಳಿತ ಕಾಲಘಟ್ಟದ ಯುದ್ಧವನ್ನು ಬಿಂಬಿಸುವ ಅಡ್ಡಣ ಪೆಟ್ಟು ಉಲ್ಲಾಕುಳು ದೈವದ ಮತ್ತೊಂದು ವಿಶೇಷ ವಾಗಿದೆ ಎಂದು ಪೂವಪ್ಪ ಕಾಣಿಯೂರು ಬಣ್ಣಿಸಿದರು.
ಕಾಲೇಜಿನ ನೂತನ ತುಳು ಕೂಟವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉದ್ಘಾಟಿಸಿ ಶುಭ ಹಾರೈಸಿದರು.


ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಈಶ್ವರ ವಾರಣಾಶಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು.


ಕಾಲೇಜಿನ ಪ್ರಾಂಶುಪಾಲ ಬಾಲಸುಬ್ರಹ್ಮಣ್ಯ ಪಿ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.‌ ಕಾಲೇಜಿನ ತುಳು ಕೂಟದ ವಿದ್ಯಾರ್ಥಿ ಅಧ್ಯಕ್ಷ ದುರ್ಗಾ ಪ್ರಸಾದ್ ಬಿ.ಎಂ ಉಪಸ್ಥಿತರಿದ್ದರು.


ಕಾಲೇಜಿನ ತುಳು ಕೂಟದ ಸಂಯೋಜಕ ಉಪನ್ಯಾಸಕ ಮನೋಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಆಜ್ಞಾಶ್ರೀ ರೈ ಸ್ವಾಗತಿಸಿದರು, ವಿದ್ಯಾರ್ಥಿನಿ ಶ್ರಾವ್ಯ ಜಿ.ಪಿ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿ ಚರಣ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments