ಅತಿ ಹೆಚ್ಚು ಈರುಳ್ಳಿ ಬೆಳೆದು, ಬಳಸುವ ದೇಶಗಳು ಭಾರತ ಮತ್ತು ಚೀನಾ. ಆದರೆ ಅತಿ ಹೆಚ್ಚು ಈರುಳ್ಳಿ ಆಮದು ರಫ್ತು ಮಾಡುವ ದೇಶಗಳು ಅವಲ್ಲ.ಈರುಳ್ಳಿಯು ಗುಣಮಟ್ಟದ ಮೇಲೆ, ಉತ್ಪಾದನೆಯ ಏರು ಪೇರು ಮೇಲೆ ಬೆಲೆ ಪಡೆಯುತ್ತದೆ. ಹಾಗಾಗಿ ರಫ್ತು ಮಾಡಿ ಗಳಿಸುವ ಡಾಲರ್‌ಗಳೂ ಇಲ್ಲಿ ಮುಖ್ಯ.

ಅತಿ ಹೆಚ್ಚು ಈರುಳ್ಳಿ ರಫ್ತು ಮಾಡುವ ದೇಶ ನೆದರ್‌ಲ್ಯಾಂಡ್ಸ್; ಇದು ಆಮದು ಮಾಡಿಕೊಂಡು ರಫ್ತು ಮಾಡುವ ದೇಶವೂ ಆಗಿದೆ. ಅತಿ ಹೆಚ್ಚು ಈರುಳ್ಳಿ ಆಮದು ಮಾಡಿಕೊಳ್ಳುವ ದೇಶ ಬಾಂಗ್ಲಾದೇಶ. ತಲಾವಾರು ಅತಿ ಹೆಚ್ಚು ಈರುಳ್ಳಿ ಬಳಸುವ ದೇಶ ಕೂಡ ಬಾಂಗ್ಲಾದೇಶವಾಗಿದೆ. ಅತಿ ಹೆಚ್ಚು ಈರುಳ್ಳಿ ರಫ್ತು ಮಾಡುವ ಪ್ರಮುಖ ದೇಶಗಳು ಹಾಗೂ ಪ್ರಮಾಣ ಹೀಗಿದೆ.

ನೆದರ್‌ಲ್ಯಾಂಡ್ಸ್ 100 ಕೋಟಿ ಟನ್, ಚೀನಾ 57.8 ಕೋಟಿ ಟನ್, ಭಾರತ 42.26 ಕೋಟಿ ಟನ್, ಯುಎಸ್‌ಎ 39.65 ಕೋಟಿ ಟನ್, ಪಾಕಿಸ್ತಾನ 21.95 ಕೋಟಿ ಟನ್, ಸ್ಪೆಯಿನ್ 19.1 ಕೋಟಿ ಟನ್, ಈಜಿಪ್ತ್ 16.1 ಕೋಟಿ ಟನ್, ಪೋಲೆಂಡ್ 13.31ಕೋಟಿ ಟನ್, ಪೆರು 12.72 ಕೋಟಿ ಟನ್. ರಫ್ತಿನ ಒಟ್ಟು ಪ್ರಮಾಣದಲ್ಲಿ ನೆದರ್‌ಲ್ಯಾಂಡ್ಸ್ ಪಾಲು 26 ಶೇಕಡಾ ಇದೆ.

ಬಾಹ್ಯಾಕಾಶವು ಪ್ರತಿ ವರುಷ 7 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಂಡು ಅತಿ ದೊಡ್ಡ ನೀರುಳ್ಳಿ ಆಮದುಗಾರ ಎನಿಸಿದೆ. ಈರುಳ್ಳಿ ಆಮದಿನಲ್ಲಿ ಮಲೇಶಿಯಾ, ಬ್ರಿಟನ್‌ಗಳು ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿ ಇವೆ.


